Advertisement
ದೆಹಲಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಫುಡ್ ಇಂಡಿಯಾ ಸಮಾವೇಶದಲ್ಲಿ ಇಷ್ಟೊಂದು ತೂಕದ ಕಿಚಡಿ ತಯಾರಿಸಿದ್ದು, ಇದೀಗ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಕಪೂರ್ ಅವರ ಈ ಪ್ರಯತ್ನಕ್ಕೆ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್, ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಯೋಗಗುರು ಬಾಬಾ ರಾಮ್‌ದೇವ್ ಸಾಥ್ ನೀಡಿದರು. ಒಂದು ರಾತ್ರಿಯಲ್ಲಿ ಸಂಜೀವ್ ಕಪೂರ್ ನೇತೃತ್ವದ 50 ಮಂದಿಯ ತಂಡ ಮತ್ತು ಎನ್‌ಜಿಒ ಅಕ್ಷಯ ಪಾತ್ರ ಸಹಯೋಗದಲ್ಲಿ ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಸುಮಾರು 1000 ಲೀ. ನೀರು ಹಿಡಿಯಬಹು ದಾದಂಥ 7 ಅಡಿ ಸುತ್ತಳತೆಯ ಬಾಣಲೆಯಲ್ಲಿ ಕಪೂರ್ ಕಿಚಡಿ ತಯಾರಿಸಿದರು. ಬಳಿಕ ಮಾತನಾಡಿದ ಗಿನ್ನೆಸ್ ವಿಶ್ವ ದಾಖಲೆಯ ಪ್ರಾಜೆಕ್ಟ್ ಮ್ಯಾನೇಜರ್ ಪೌಲಿನಾ ಸಪಿನ್‌ಸ್ಕಾ, “918 ಕೆ.ಜಿ.ಯ ಈ ಕಿಚಡಿಯು ಗಿನ್ನೆಸ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾಗಿದೆ’ ಎಂದು ಘೋಷಿಸಿದರು.