Advertisement

ನೀರಾವರಿ ಯೋಜನೆಗಳಿಗೆ 9 ಸಾವಿರ ಕೋಟಿ ನಿಧಿ

06:25 AM Aug 17, 2017 | Team Udayavani |

ಹೊಸದಿಲ್ಲಿ: ದೇಶದ ನೀರಾವರಿ ಯೋಜನೆಗಳ ಕಾಮಗಾರಿ ಮುಗಿಸಲು 9,000 ಕೋಟಿ ರೂ.  ಸಂಗ್ರಹಿಸಿ ಕೊಳ್ಳಲು ನಬಾರ್ಡ್‌ಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌(ನಬಾರ್ಡ್‌) ಪ್ರಸಕ್ತ ಹಣಕಾಸು ವರ್ಷದಲ್ಲೇ 9,000 ಕೋಟಿ ರೂ. ಬಾಂಡ್‌ಗಳ ಮಾರಾಟ ಮಾಡಿ ಸಂಗ್ರಹಿಸಲು ಅನುವು ಮಾಡಿಕೊಟ್ಟಿದೆ. ಸದ್ಯ ದೇಶದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 99 ಯೋಜನೆಗಳು ಪ್ರಗತಿಯಲ್ಲಿವೆ.

Advertisement

ಈ ನಿಧಿಯನ್ನು ನಬಾರ್ಡ್‌ ಶೇ. 6ರ ಬಡ್ಡಿದರ ನೀಡಿ ಸಂಗ್ರಹಿಸಬಹುದಾಗಿದೆ. ಅಂದರೆ ನಬಾರ್ಡ್‌ ರಾಜ್ಯಗಳಿಗೆ ಬಾಂಡ್‌ಗಳ ಮೂಲಕ ಸಾಲ ನೀಡಬಹುದಾಗಿದೆ. ಕಳೆದ ಬಜೆಟ್‌ನಲ್ಲೇ ಹಣಕಾಸು ಸಚಿವರು ದೀರ್ಘಾವಧಿ ನೀರಾವರಿ ನಿಧಿ ರಚನೆಗೆ ಅವಕಾಶ ನೀಡಿ ಈ ಮೂಲಕ 20 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲು ಅನುವು ಮಾಡಿಕೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next