Advertisement

ನಟಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ 90 ಲಕ್ಷ ರೂ. ವಂಚನೆ ಆರೋಪ?

12:49 AM Jun 15, 2024 | Team Udayavani |

ಮುಂಬಯಿ: ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ದಂಪತಿ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ತಮ್ಮ ಸತ್ಯಯುಗ ಚಿನ್ನದ ಕಂಪೆನಿಯಿಂದ ಉದ್ಯಮಿ ಪೃಥ್ವಿರಾಜ್‌ ಕೊಠಾರಿ ಗೆ 90 ಲ. ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕೊಠಾರಿ ಮುಂಬಯಿ ಕೋರ್ಟ್‌ ಮೊರೆ ಹೋಗಿದ್ದು, ಶಿಲ್ಪಾ, ದಂಪತಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್‌ ಸೂಚಿಸಿದೆ. 2014ರಲ್ಲಿ ಸತ್ಯಯುಗ ಕಂಪೆನಿಯ ಚಿನ್ನದ ಯೋಜನೆ ಮೇಲೆ ಕೊಠಾರಿ 90 ಲಕ್ಷ ರೂ. ಹೂಡಿಕೆ ಮಾಡಿದ್ದರು. ಯೋಜನೆಯ ಅವಧಿ ಬಳಿಕ ಅವರಿಗೆ ನಿರೀಕ್ಷಿತ 5 ಕೆ.ಜಿ. ಚಿನ್ನ ದೊರೆಯದ ಕಾರಣ ಕೊಠಾರಿ ಅವರು ಶಿಲ್ಪಾ, ರಾಜ್‌ ದಂಪತಿ ವಿರುದ್ಧ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next