Advertisement

90% ಮಂದಿಗೆ ಲಸಿಕೆ ಪೂರ್ಣ : ಸೋಂಕು ನಿಯಂತ್ರಣಕ್ಕೆ ಜನರ ಬೆಂಬಲ

01:17 AM Jul 06, 2022 | Team Udayavani |

ಕೊರೊನಾ ವಿರುದ್ಧ ಲಸಿಕೆ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ದೇಶದಲ್ಲಿ ಜು.4ಕ್ಕೆ ಮುಕ್ತಾಯವಾದಂತೆ 2 ಡೋಸ್‌ ಲಸಿಕೆಗಳನ್ನು ಪಡೆದವರ ಪ್ರಮಾಣ ಶೇ.90 ಆಗಿದೆ. 84.49 ಕೋಟಿ ಮಂದಿಗೆ 2ನೇ ಡೋಸ್‌ನ ಲಸಿಕೆಯೂ ಹಾಕಿಸಲಾಗಿದೆ. ಹೀಗಾಗಿ, ಕೇಂದ್ರ ಸರಕಾರ ಸೋಂಕು ನಿಯಂತ್ರಿಸಲು ಕೈಗೊಂಡ ಪ್ರಯತ್ನಕ್ಕೆ ದೇಶದ ಜನರೂ ಬೆಂಬಲ ನೀಡಿದ್ದಾರೆ ಎಂದರೆ ತಪ್ಪಾಗಲಾರದು.

Advertisement

ನಿಧಾನಗತಿಯಲ್ಲಿ ಇತ್ತು 2ನೇ ಡೋಸ್‌
ದೇಶದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ತೀವ್ರಗೊಂಡಿದ್ದ ಸಂದರ್ಭದಲ್ಲಿ ಲಸಿಕೆ ಹಾಕಿಸಲು ಜನರೂ ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದರು. ಸದ್ಯ ದೇಶದಲ್ಲಿ ಸೋಂಕು ನಿಯಂತ್ರಣದಲ್ಲಿ ಇರುವುದರಿಂದ 2ನೇ ಡೋಸ್‌ ಲಸಿಕೆಗೆ ಮೊದಲ ಡೋಸ್‌ ಹಾಕಿಸಲು ತೋರಿಸಿದ ಉತ್ಸಾಹ ತೋರಿಸಲಿಲ್ಲ. ಇದರ ಹೊರತಾಗಿಯೂ ಕೂಡ ಗುರಿ ಸಾಧಿಸಲಾಗಿದೆ ಎನ್ನುವುದು ಗಮನಾರ್ಹ. ಫೆ.19ಕ್ಕೆ ದೇಶದ ಶೇ.80 ಮಂದಿಗೆ 2 ಡೋಸ್‌ ಲಸಿಕೆ ಪೂರ್ತಿಯಾಗಿತ್ತು. ಆ ದಿನದಿಂದ ಶೇ.90ರ ಗುರಿ ತಲುಪಲು 135 ದಿನಗಳು ಬೇಕಾಯಿತು. ಲಸಿಕೆಯ ಮೊದಲ ಡೋಸ್‌ನ ಶೇ.80ರಿಂದ ಶೇ.90ರ ಗುರಿ ತಲುಪಲು 49 ದಿನಗಳು ಬೇಕಾಗಿದ್ದವು.

2021ರ ಜನವರಿಯಲ್ಲಿ
ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ 2021 ಜ.16ರಿಂದ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾ ಗಿತ್ತು. ನಂತರ ಅದನ್ನು 18ರಿಂದ 59 ವರ್ಷ ವಯೋಮಿತಿಗೆ ಲಸಿಕೆ ಹಾಕುವು ದನ್ನು ವಿಸ್ತರಿಸಲಾಗಿತ್ತು. ಈ ವರ್ಷದ ಮಾ.16ರಿಂದ 12ರಿಂದ 14 ವರ್ಷ ದವರಿಗೆ ಲಸಿಕೆ ನೀಡಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ
ದೇಶದ ಅಭೂತಪೂರ್ವ ಸಾಧನೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಆಗ್ನೇಯ ಏಷ್ಯಾಕ್ಕೆ ಸಂಬಂಧಿ ಸಿದಂತೆ ಭಾರತದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಲಸಿಕೆ ನೀಡಿ ಸಾಧನೆ ಮಾಡಲಾಗಿದೆಯ ಶೀಘ್ರದ ಲ್ಲಿಯೇ 200 ಕೋಟಿ ಡೋಸ್‌ ಅನ್ನು ನೀಡಿ ಭಾರತ ಸರಕಾರ ಸಾಧನೆ ಮಾಡುವುದು ನಿಶ್ಚಿತ ಎಂದು ಡಬ್ಲೂéಎಚ್‌ಒದ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್‌ ಸಿಂಗ್‌ ಹೇಳಿದ್ದಾರೆ.

55,83,57,087 : ಮೊದಲ ಡೋಸ್‌ ಪಡೆದವರು
50,22,61,478 : ಎರಡನೇ ಡೋಸ್‌ ಪಡೆದವರು
44 ಲಕ್ಷ ಬೂಸ್ಟರ್‌ ಡೋಸ್‌ ಪಡೆದವರು.
535 ದಿನಗಳು 90% ಮಂದಿಗೆ 2 ಡೋಸ್‌ ಲಸಿಕೆ ನೀಡಲು ಬೇಕಾಗಿದ್ದ ದಿನಗಳು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next