ಉತ್ತರಾಖಂಡ್: ರಸ್ತೆ ದಾಟುತ್ತಿದ್ದ 9 ವರ್ಷದ ಬಾಲಕನಿಗೆ ಬೈಕ್ ಢಿಕ್ಕಿ ಹೊಡೆದು, ಬಾಲಕ ಮೃತಪಟ್ಟ ಘಟನೆ ಉತ್ತರಾಖಂಡದ ಅಗಸ್ತ್ಯಮುನಿ ನಗರ ಪ್ರದೇಶದ ಬುನಿಯಾಡಿ ವಾರ್ಡ್‌ನಲ್ಲಿರುವ ದೇವನಗರದಲ್ಲಿ ಭಾನುವಾರ ಮಧ್ಯಾಹ್ನ( ಮಾ. 19 ರಂದು ) ನಡೆದಿದೆ.
ದೇವರಾಜ್ (9) ಮೃತ ಬಾಲಕ.
ಇದನ್ನೂ ಓದಿ: ಧೋನಿ ಫಿಟ್ ಆಗಿದ್ದಾರೆ 3-4 ವರ್ಷ ಐಪಿಎಲ್ ಆಡಬಹುದು: ಆಸೀಸ್ ಮಾಜಿ ಆಟಗಾರ
ಬಾಲಕ ದೇವರಾಜ್ ಬುನಿಯಾಡಿಯಲ್ಲಿ ನಡೆಯುತ್ತಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂಗಡಿಗೆಂದು ರಸ್ತೆ ದಾಟಲು ಹೋಗಿದ್ದಾನೆ. ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ರಸ್ತೆಯನ್ನು ದಾಟಲು ಓಡಿ ಹೋಗುತ್ತಿದ್ದ ಬಾಲಕನಿಗೆ ಢಿಕಿ ಹೊಡೆದಿದೆ. ಪರಿಣಾಮ ಬಾಲಕ ಕೆಲ ದೂರ ಎಸೆಯಲ್ಪಟ್ಟಿದ್ದಾನೆ.
Related Articles
ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ತೀವ್ರ ಸ್ವರೂಪದಿಂದ ಗಾಯಗೊಂಡ ಬಾಲಕ ಆದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಕುರಿತು ಪೋಷಕರು ನೀಡಿದ ದೂರಿನ ಮೇಲೆ ಪೊಲೀಸರು ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.