Advertisement

ಟೆಕ್ಸಾಸ್ ಮಾಲ್‌ ನಲ್ಲಿ ಗುಂಡಿನ ದಾಳಿ: ಮಗು ಸೇರಿದಂತೆ 8 ಮಂದಿ ಮೃತ್ಯು

10:25 AM May 07, 2023 | Team Udayavani |

ಟೆಕ್ಸಾಸ್:‌ ಮಾಲ್‌ ವೊಂದರಲ್ಲಿ ಗುಂಡಿನ ದಾಳಿ ನಡೆದ ಪರಿಣಾಮ 8 ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಟೆಕ್ಸಾಸ್‌ ನಗರದಲ್ಲಿ ಶನಿವಾರ (ಮೇ 6 ರಂದು) ನಡೆದಿರುವುದು ವರದಿಯಾಗಿದೆ.

Advertisement

ನಗರದ ಡಲ್ಲಾಸ್‌ನಲ್ಲಿರುವ ಮಾಲ್ ವೊಂದರಲ್ಲಿ ಶನಿವಾರ ಬಂದೂಕುಧಾರಿ ವ್ಯಕ್ತಿಯೊಬ್ಬ ಅಲ್ಲಿದ್ದ ಜನರ ಮೇಲೆ ಮನಬಂದಂತೆ ಗುಂಡುಗಳನ್ನು ಹಾರಿಸಿದ್ದಾನೆ. ನೂರಕ್ಕೂ ಅಧಿಕ ಮಂದಿ ಭೀತಿಯಿಂದ ಅತ್ತಿತ್ತ ಓಡಿದ್ದಾರೆ. ಟೆಕ್ಸಾಸ್‌ನಲ್ಲಿರುವ ಅಲೆನ್ ಪ್ರೀಮಿಯಂ ಔಟ್‌ಲೆಟ್‌ಗಳ ಮಾಲ್ ನಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರಿಗೆ ಕೂಡಲೇ ಮಾಹಿತಿ ಬಂದಿದೆ. ಪೊಲೀಸರು ಬಂದೂಕುಧಾರಿ ವ್ಯಕ್ತಿಯನ್ನು ಶೂಟ್‌ ಮಾಡಿ ಹತ್ಯೆಗೈದಿದ್ದಾರೆ.

ಗುಂಡಿನ ದಾಳಿಯಲ್ಲಿ ಮೊದಲು 7 ಮಂದಿ ಮೃತಪಟ್ಟಿದ್ದು, ಆ ಬಳಿಕ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗು ಸೇರಿದಂತೆ 8 ಮಂದಿ ಹತರಾಗಿದ್ದು, 7 ಮಂದಿಗೆ ಗಾಯಗಳಾಗಿವೆ ಎಂದು ನಗರ ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಹಾರ್ವೆ ಹೇಳಿದ್ದಾರೆ.

ಅಮೆರಿಕಾದಲ್ಲಿ ಶೂಟೌಟ್‌ ಪ್ರಕರಣಗಳು ಸರ್ವೆಸಾಮಾನ್ಯದಂತೆ ನಡೆಯುತ್ತಿದೆ. 2023 ರಲ್ಲಿ ಇದುವರೆಗೆ 198 ಶೂಟೌಟ್‌ ಗಳು ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next