Advertisement

El Salvador stadium: ಕಾಲ್ತುಳಿತದಲ್ಲಿ 9 ಮಂದಿ ದುರ್ಮರಣ; ಹಲವರಿಗೆ ಗಾಯ

12:12 PM May 21, 2023 | Team Udayavani |

ಸ್ಯಾನ್ ಸಾಲ್ವಡಾರ್: ಅಮೆರಿಕದ ಎಲ್ ಸಾಲ್ವಡಾರ್‌ ನ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಫ‌ುಟ್‌ ಬಾಲ್‌ ಪಂದ್ಯದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 9 ಮಂದಿ ಮೃತಪಟ್ಟಿದ್ದ ಘಟನೆ ನಡೆದಿದೆ.

Advertisement

ಘಟನೆಯಲ್ಲಿ ಹಲವು ಗಾಯಗೊಂಡಿದ್ದು, ಈ ಪೈಕಿ ಹಲವ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲಿಯಾಂಜಾ ಮತ್ತು ಎಫ್ ಎಎಸ್‌ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಸ್ಯಾನ್‌ ಸ್ವಾಲಡಾರ್‌ ನ ಸ್ಟೇಡಿಯಂಗೆ ಪ್ರವೇಶಿಸಲು ಅಭಿಮಾನಿಗಳು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ನಂತರ ಸಾಕಷ್ಟು ಗೊಂದಲ ಉಂಟಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next