ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ ಒಂಬತ್ತು ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ.
ಇಂದು ಕಲಬುರಗಿಯಲ್ಲಿ ಹೊಸ ಎಂಟು ಪ್ರಕರಣಗಳು ಕಂಡು ಬಂದಿದೆ. ಮತ್ತೊಂದು ಪ್ರಕರಣ ಬೆಳಗಾವಿಯ ಹುಕ್ಕೇರಿಯಲ್ಲಿ ದೃಢವಾಗಿದೆ. ಇಂದಿನ ಸೋಂಕಿತರಲ್ಲಿ ಹೆಚ್ಚಿನವರು ಮಕ್ಕಳೇ ಇರುವುದು ಆತಂಕ್ಕೆ ಕಾರಣವಾಗಿದೆ.
ಸೋಂಕಿತ ಸಂಖ್ಯೆ 293ರ ಸಂಪರ್ಕದಿಂದ ಬೆಳಗಾವಿ ಹುಕ್ಕೇರಿಯಲ್ಲಿ 12 ವರ್ಷದ ಬಾಲಕನಿಗೆ ಸೋಂಕು ದೃಢವಾಗಿದೆ.
ಸೋಂಕಿತ ಸಂಖ್ಯೆ 395ರ ಸಂಪರ್ಕದಿಂದ ಕಲಬುರಗಿಯ 4.6 ವರ್ಷದ ಹೆಣ್ಣುಮಗುವಿಗೆ ಸೋಂಕು ದೃಢವಾಗಿದೆ. ಸೋಂಕಿತ ಸಂಖ್ಯೆ 515ರ ಸಂಪರ್ಕದಿಂದ 28 ವರ್ಷದ ವ್ಯಕ್ಕಿಗೆ ಸೋಂಕು ತಾಗಿದ್ದರೆ, ಸೋಂಕಿತ ಸಂಖ್ಯೆ 205ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢವಾಗಿದೆ.
ಸೋಂಕಿತ ಸಂಖ್ಯೆ 425ರ ಸಂಪರ್ಕದಿಂದ ನಾಲ್ವರಿಗೆ ಸೋಂಕು ತಾಗಿದ್ದು, 40 ವರ್ಷದ ಹೆಂಗಸು ಮತ್ತು ಮೂವರು ಹೆಣ್ಣು ಮಕ್ಕಳಿಗೆ ಸೋಂಕು ದೃಢವಾಗಿದೆ.