Advertisement

ಸ್ಯಾಂಡಲ್ ವುಡ್: ಈ ವಾರ ತೆರೆಗೆ 9 ಚಿತ್ರಗಳು

08:21 AM Jul 08, 2022 | Team Udayavani |

ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕಳೆದ ವಾರಕ್ಕೆ ಈ ವರ್ಷದ ನೂರನೇ ಸಿನಿಮಾ ಬಿಡುಗಡೆಯಾಗಿದೆ. ಈಗ ಮತ್ತಷ್ಟು ಚಿತ್ರಗಳು ಬಿಡುಗಡೆಗೆ ಮುಂದಾಗಿವೆ.

Advertisement

ಅದರಲ್ಲೂ ಈ ವಾರ (ಜು.8) ಬರೋಬ್ಬರಿ 9 ಸಿನಿಮಾಗಳು ತೆರೆಕಾಣುವ ಮೂಲಕ ಚಿತ್ರಮಂದಿ ರಗಳು ರಂಗೇರಲಿವೆ. “ವೆಡ್ಡಿಂಗ್‌ ಗಿಫ್ಟ್’, “ತೂತು ಮಡಿಕೆ’, “ಶುಗರ್‌ಲೆಸ್‌’, “ನಮ್ಮ ಹುಡುಗರು’, “ಗಿರ್ಕಿ’, “ಹೋಪ್‌’, “ಧೋನಿ’, “ಚೋಟಾ ಬಾಂಬೆ’, “ಅಂಗೈಲಿ ಅಕ್ಷರ’ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿವೆ.

ಬಿಡುಗಡೆಯಾಗುತ್ತಿರುವ 9 ಚಿತ್ರಗಳಲ್ಲಿ ಭಿನ್ನ-ವಿಭಿನ್ನ ಜಾನರ್‌ಗೆ ಸೇರಿದ, ಈಗಾಗಲೇ ಟ್ರೇಲರ್‌, ಟೀಸರ್‌ ಮೂಲಕ ಗಮನ ಸೆಳೆದ ಚಿತ್ರಗಳಿವೆ.

“ವೆಡ್ಡಿಂಗ್‌ ಗಿಫ್ಟ್’ ಕೋರ್ಟ್‌ ರೂಂ ಡ್ರಾಮಾವಾದರೆ, “ತೂತು ಮಡಿಕೆ’ ಥ್ರಿಲ್ಲರ್‌ ಚಿತ್ರ. ಇನ್ನು, “ಶುಗರ್‌ಲೆಸ್‌’, “ಹೋಪ್‌’ ಕೂಡಾ ಹೊಸ ಬಗೆಯ ಕಂಟೆಂಟ್‌ ಹೊಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ವಾರ ಪ್ರೇಕ್ಷಕನಿಗೆ ಸಿನಿಮಾಗಳ ಆಯ್ಕೆಗೆ ಹೆಚ್ಚಿನ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next