Advertisement

ನೇಪಾಳದಲ್ಲಿ  ಹಿಮಪಾತಕ್ಕೆ 9 ಪರ್ವತಾರೋಹಿಗಳು ಬಲಿ

06:00 AM Oct 14, 2018 | |

ಕಠ್ಮಂಡು: ನೇಪಾಳದಲ್ಲಿ ಉಂಟಾದ ಹಿಮಪಾತದಲ್ಲಿ ದಕ್ಷಿಣ ಕೊರಿಯಾದ ಐವರು ಸೇರಿದಂತೆ 9 ಮಂದಿ ಅಸುನೀಗಿದ್ದಾರೆ. ಗುರ್ಜಾ ಪರ್ವತ ಪ್ರದೇಶದಲ್ಲಿದ್ದ ಅವರ ಬೇಸ್‌ ಕ್ಯಾಂಪ್‌ ಹಿಮದ ಅಡಿಯಲ್ಲಿ ಹುದುಗಿ ಹೋಗಿದೆ. ಪಶ್ಚಿಮ ನೇಪಾಳದ ಧವಳಗಿರಿ ಪರ್ವತದ ದಕ್ಷಿಣ ಭಾಗದಿಂದ 3,500 ಅಡಿ ಎತ್ತರದಲ್ಲಿ ಬೇಸ್‌ ಕ್ಯಾಂಪ್‌ ನಿರ್ಮಾಣವಾಗಿತ್ತು. ಶುಕ್ರವಾರ ಏಕಾಏಕಿ ಹಿಮಪಾತವಾಗಿದ್ದರಿಂದ ಈ ದುರ್ಘ‌ಟನೆ ಸಂಭವಿಸಿದೆ ಎಂದು ನೇಪಾಳದ ಚಾರಣ ತೆರಳುವವರ ಸಂಸ್ಥೆಗಳ ಒಕ್ಕೂಟ ಟ್ರೆಕಿಂಗ್‌ ಕ್ಯಾಂಪ್‌ ನೇಪಾಳದ ಎಂ.ಡಿ. ವಾಂಗುc ಶೆರ್ಪಾ ಹೇಳಿದ್ದಾರೆ. 

Advertisement

ಗುರ್ಜಾ ಗ್ರಾಮದಿಂದ ಅ.7ರಂದು ಒಂಭತ್ತು ಮಂದಿ ಪರ್ವತಕ್ಕೆ ತೆರಳಿದ್ದರು. ಇನ್ನೂ ಉತ್ತಮ ಹವಾಮಾನ ಬಂದು ಚಾರಣ ಮುಂದುವರಿಸಲು ಕಾಯುತ್ತಿರುವಾಗ ಹಿಮಪಾತವಾಗಿದೆ. ಅಸುನೀಗಿರುವ ದಕ್ಷಿಣ ಕೊರಿಯಾದ ಕಿಂ ಚಾಂಗ್‌ ಹೋ ಅವರ ದೇಶದಿಂದ ಮೊದಲ ಬಾರಿಗೆ 8 ಸಾವಿರ ಅಡಿ ಎತ್ತರಕ್ಕೆ ಬದಲಿ ಆಮ್ಲಜನಕ ವ್ಯವಸ್ಥೆ ಇರಿಸಿಕೊಳ್ಳದೆ ಪರ್ವತ ಏರಿದ ದಾಖಲೆಗೆ ಪಾತ್ರರಾಗಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next