Advertisement

9 ಚಿನ್ನದ ಪದಕ ಬಾಚಿದ ಬಾಗಲಕೋಟೆ ಮಕ್ಕಳು

06:26 PM Aug 06, 2022 | Team Udayavani |

ಬಾಗಲಕೋಟೆ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕರಾಟೆ ಸಂಸ್ಥೆ ರಾಠೊಡ ಮಾರ್ಷಲ್‌ ಆರ್ಟ್ಸ್ ಮತ್ತು ಸ್ಕಿಲ್‌ ಯೂನಿಯನ್‌ನ ವಿದ್ಯಾರ್ಥಿಗಳು ಒಟ್ಟು 9 ಚಿನ್ನದ ಪದಕ ಬಾಚಿದ್ದಾರೆ.

Advertisement

ಸುಮಾರು 10 ವಿವಿಧ ದೇಶಗಳಿಂದ ಸ್ಪರ್ಧೆಗಿಳಿದ 4800ಕ್ಕೂ ಹೆಚ್ಚು ಕರಾಟೆ ಪಟುಗಳ ಜತೆ ರಾಜ್ಯದ ಕರಾಟೆ ಪಟುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪ ರ್ಧಿಸಿ 30 ಪದಕ ಬಾಚಿಕೊಂಡಿದ್ದಾರೆ. ಜಪಾನ್‌, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ದೇಶಗಳ ಕ್ರೀಡಾಪಟುಗಳು ನೀಡಿದ ಕಠಿಣ ಸ್ಪರ್ಧೆಗೆ ಎದೆಯೊಡ್ಡಿ 9 ಚಿನ್ನ, 12 ಬೆಳ್ಳಿ ಮತ್ತು 9 ಕಂಚಿನ ಪದಕ ಗೆದ್ದಿದ್ದಾರೆ.

ಕರ್ನಾಟಕದ ವಿದ್ಯಾರ್ಥಿಗಳ ಪ್ರದರ್ಶನ ಕಂಡು ಕಾಮನ್‌ವೆಲ್ತ್‌ ಕರಾಟೆ ಫೆಡರೇಷನ್‌ ಅಧ್ಯಕ್ಷ ಸೋನಿ ಪಿಳ್ಳೆ ಹಾಗೂ ಭಾರತದ ಡಬ್ಲೂಕೆಎಫ್‌ ಮುಖ್ಯ ರೆಫ್ರಿ ಹಾನ್ಸಿ ಪ್ರೇಮಜಿತ್‌ ಸೇನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯದ ಚೀಪ್‌ ಕೋಚ್‌ ಎಸ್‌.ಆರ್‌. ರಾಠೊಡ ತಿಳಿಸಿದ್ದಾರೆ. ಚಾಂಪಿಯನ್‌ಶಿಪ್‌ ನಲ್ಲಿ ಪದಕ ಜಯಿಸಿ ತಾಯ್ನಾಡಿಗೆ ಬಂದಿಳಿದ ವಿದ್ಯಾರ್ಥಿಗಳನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಉಪತಹಶೀಲ್ದಾರ್‌ ಬಸವರಾಜ ಸಿಂದಗಿಕರ, ಪೊಲೀಸ್‌ ಉಪ ನಿರೀಕ್ಷಕ ನಾಗಪ್ಪ ಮಹಾರಾಜನವರ, ಕವಿಗಳಾದ ಎಚ್‌.ಎನ್‌. ಶೇಬನ್ನವರ, ರಾಮಪ್ಪ ಹುನ್ನೂರ, ಮಹಾಂತೇಶ ಪಲ್ಲೇದ, ವೀರಯ್ಯ ಆರಾಧ್ಯಮಠ, ರಶ್ಮಿ ಹುನ್ನೂರ, ಜ್ಯೋತಿ ಹುನ್ನೂರ, ಮಲ್ಲಯ್ಯ ಹಿರೇಮಠ, ಈರಯ್ಯ ಶಿರೂರ ಉಪಸ್ಥಿತರಿದ್ದರು.

ಸಾಧನೆಗೈದ ಕರಾಟೆ ಪಟುಗಳಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜಿ ಗೂಡನವರ, ಮೇಲ್ವಿಚಾರಕ ರಂಗಪ್ಪ ಕ್ಯಾಲಕೊಂಡ, ಸಿಬ್ಬಂದಿ ಹಾಗೂ ಪಾಲಕರು ಕ್ರೀಡೆಗಳ ಕ್ರೀಡಾಪಟುಗಳು ಶುಭ ಕೋರಿದರು.

Advertisement

ಪದಕ ಪಡೆದ ಕ್ರೀಡಾಪಟುಗಳು: ಶಾಂತೇಶ ಚವ್ಹಾಣ (ಚಿನ್ನ), ಖುಷಿ ಹುನ್ನೂರ (ಚಿನ್ನ), ಸಾಗರ ಚವ್ಹಾಣ (ಚಿನ್ನ), ಆನಂದ ನಾಯ್ಕ (ಚಿನ್ನ), ಲಕ್ಷ್ಮೀ ಕಂಬಾರ (ಚಿನ್ನ), ಪ್ರಭುಸ್ವಾಮಿ ಆರಾಧ್ಯಮಠ (ಚಿನ್ನ ಮತ್ತು ಕಂಚು), ಪುಟ್ಟರಾಜ ಶೇಬನ್ನವರ (ಚಿನ್ನ), ಸಾತ್ವಿಕ ಶೇಬನ್ನವರ (ಚಿನ್ನ), ಸಾಗರಕುಮಾರ ಮರಕುಂಬಿ (ಬೆಳ್ಳಿ), ನಿತಿನ್‌ ಮಹಾರಾಜನವರ (ಬೆಳ್ಳಿ), ಅಜಿತ್‌ ಕೊಡಿಯೋ (ಬೆಳ್ಳಿ ಮತ್ತು ಕಂಚು), ಪವನ ಸಿಂದಗಿಕರ (ಬೆಳ್ಳಿ ಮತ್ತು ಕಂಚು), ಹುಲ್ಲಪ್ಪ ಕಪನೂರ (ಬೆಳ್ಳಿ), ಓಂಕಾರ ಬೊಂಡಾಡೆ (ಬೆಳ್ಳಿ), ಶರಣಗೌಡ ಪಾಟೀಲ (ಬೆಳ್ಳಿ), ಸಂತೋಷ ಲಮಾಣಿ (ಎರಡು ಬೆಳ್ಳಿ), ದ್ರುವಕುಮಾರ ಕೆ. (ಬೆಳ್ಳಿ), ಸಮರ್ಥ ದಳವಾಯಿ (ಬೆಳ್ಳಿ), ಶ್ರೇಯಸ್ಸು ಹಿರೇಮಠ (ಕಂಚು), ಶ್ರೀವಾತ್ಸವ ಪಲ್ಲೇದ (ಕಂಚು), ತನಿಷ್ಕಾ (ಕಂಚು), ಜಯಂತ ನಾಯ್ಕ (ಕಂಚು), ವಿಶ್ವನಾಥ ಶಿರೂರ (ಕಂಚು), ಆದರ್ಶ ಹಿರೇಮಠ (ಕಂಚು) ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next