Advertisement
ಸುಮಾರು 10 ವಿವಿಧ ದೇಶಗಳಿಂದ ಸ್ಪರ್ಧೆಗಿಳಿದ 4800ಕ್ಕೂ ಹೆಚ್ಚು ಕರಾಟೆ ಪಟುಗಳ ಜತೆ ರಾಜ್ಯದ ಕರಾಟೆ ಪಟುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪ ರ್ಧಿಸಿ 30 ಪದಕ ಬಾಚಿಕೊಂಡಿದ್ದಾರೆ. ಜಪಾನ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ದೇಶಗಳ ಕ್ರೀಡಾಪಟುಗಳು ನೀಡಿದ ಕಠಿಣ ಸ್ಪರ್ಧೆಗೆ ಎದೆಯೊಡ್ಡಿ 9 ಚಿನ್ನ, 12 ಬೆಳ್ಳಿ ಮತ್ತು 9 ಕಂಚಿನ ಪದಕ ಗೆದ್ದಿದ್ದಾರೆ.
Related Articles
Advertisement
ಪದಕ ಪಡೆದ ಕ್ರೀಡಾಪಟುಗಳು: ಶಾಂತೇಶ ಚವ್ಹಾಣ (ಚಿನ್ನ), ಖುಷಿ ಹುನ್ನೂರ (ಚಿನ್ನ), ಸಾಗರ ಚವ್ಹಾಣ (ಚಿನ್ನ), ಆನಂದ ನಾಯ್ಕ (ಚಿನ್ನ), ಲಕ್ಷ್ಮೀ ಕಂಬಾರ (ಚಿನ್ನ), ಪ್ರಭುಸ್ವಾಮಿ ಆರಾಧ್ಯಮಠ (ಚಿನ್ನ ಮತ್ತು ಕಂಚು), ಪುಟ್ಟರಾಜ ಶೇಬನ್ನವರ (ಚಿನ್ನ), ಸಾತ್ವಿಕ ಶೇಬನ್ನವರ (ಚಿನ್ನ), ಸಾಗರಕುಮಾರ ಮರಕುಂಬಿ (ಬೆಳ್ಳಿ), ನಿತಿನ್ ಮಹಾರಾಜನವರ (ಬೆಳ್ಳಿ), ಅಜಿತ್ ಕೊಡಿಯೋ (ಬೆಳ್ಳಿ ಮತ್ತು ಕಂಚು), ಪವನ ಸಿಂದಗಿಕರ (ಬೆಳ್ಳಿ ಮತ್ತು ಕಂಚು), ಹುಲ್ಲಪ್ಪ ಕಪನೂರ (ಬೆಳ್ಳಿ), ಓಂಕಾರ ಬೊಂಡಾಡೆ (ಬೆಳ್ಳಿ), ಶರಣಗೌಡ ಪಾಟೀಲ (ಬೆಳ್ಳಿ), ಸಂತೋಷ ಲಮಾಣಿ (ಎರಡು ಬೆಳ್ಳಿ), ದ್ರುವಕುಮಾರ ಕೆ. (ಬೆಳ್ಳಿ), ಸಮರ್ಥ ದಳವಾಯಿ (ಬೆಳ್ಳಿ), ಶ್ರೇಯಸ್ಸು ಹಿರೇಮಠ (ಕಂಚು), ಶ್ರೀವಾತ್ಸವ ಪಲ್ಲೇದ (ಕಂಚು), ತನಿಷ್ಕಾ (ಕಂಚು), ಜಯಂತ ನಾಯ್ಕ (ಕಂಚು), ವಿಶ್ವನಾಥ ಶಿರೂರ (ಕಂಚು), ಆದರ್ಶ ಹಿರೇಮಠ (ಕಂಚು) ಪಡೆದಿದ್ದಾರೆ.