Advertisement

ಮೊಹರಂಗೆ 9.92 ಲಕ್ಷ ದೇಣಿಗೆ ಸಂಗ್ರಹ

06:27 PM Aug 13, 2022 | Team Udayavani |

ಮುದಗಲ್ಲ: ಪಟ್ಟಣದಲ್ಲಿ ಕಳೆದ 10 ದಿನಗಳಿಂದ ನಡೆದ ಐತಿಹಾಸಿಕ ಮೊಹರಂ ಹಬ್ಬಕ್ಕೆ ಈ ಬಾರಿ ಅಪಾರ ಸಂಖ್ಯೆಯಲ್ಲಿ ಭಕ್ತಗಣ ಹರಿದು ಬಂದಿದ್ದು, 9,92,925 ರೂ. ದೇಣಿಗೆ ಸಂಗ್ರಹವಾಗಿದೆ ಎಂದು ಹುಸೇನಿ ಆಲಂ ದರ್ಗಾ ಕಮಿಟಿ ಕಾರ್ಯದರ್ಶಿ ಸಾಕ್‌ ಅಲಿ ತಿಳಿಸಿದರು.

Advertisement

ಕಳೆದೆರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಐತಿಹಾಸಿಕ ಮುದಗಲ್ಲ ಮೊಹರಂ ಹಬ್ಬದಾಚರಣೆ ಮೊಟಕಾಗಿತ್ತು. ಈ ಬಾರಿ ಭಾವೈಕ್ಯತೆಗೆ ಹೆಸರಾದ ಮುದಗಲ್ಲ ಮೊಹರಂ ಹಬ್ಬವು ಸಡಗರ ಸಂಭ್ರಮದಿಂದ ಮನೆ ಮಾಡಿತ್ತು. ಬೆಳಗಿನಿಂದಲೂ ದರ್ಗಾದ ಆವರಣದಲ್ಲಿ ನಡೆದ ಎಣಿಕೆ ಕಾರ್ಯ ಸಂಜೆವರೆಗೂ ನಡೆಯಿತು.

ದರ್ಗಾದ ಅಧ್ಯಕ್ಷ ಅಮೀರ್‌ ಬೇಗ್‌ಉಸ್ತಾದ್‌, ನಾಗರಾಜ ದಫೇದಾರ, ರಾಜು ಪಾಟೀಲ್‌, ಮೈಬೂಬ ಬಾರಿಗಿಡ, ಹಸನ್‌, ನ್ಯಾಮತುಲ್ಲಾಖಾದ್ರಿ, ಅಬೀದ್‌ ಅಲಿ, ಹಾಜಿಮಲಂಗಬಾಬಾ, ಗಯಾಸುದ್ದೀನ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next