Advertisement

ಅಕಾಲಿಕ ಮಳೆಗೆ 892 ಹೆಕ್ಟೇರ್‌ ಬೆಳೆ ನಾಶ

06:22 PM Nov 20, 2021 | Team Udayavani |

ರಾಣಿಬೆನ್ನೂರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಸುಮಾರು 892.3 ಹೆಕ್ಟೇರ್‌ ನಲ್ಲಿ ಬೆಳೆದಿದ್ದ ಭತ್ತ, ಜೋಳ, ಸೂರ್ಯಕಾಂತಿ, ಗೋವಿನಜೋಳ, ಹತ್ತಿ, ಶೇಂಗಾ, ಅವರೆ ಸೇರಿದಂತೆ ಮತ್ತಿತರ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿದ್ದು, ಸುಮಾರ 1.25 ಕೋಟಿಗೂ ಅಧಿಕ ನಷ್ಟವಾಗಿದೆ. ಇದರಿಂದ, ಅನ್ನದಾತರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ಕೊಯ್ಲಿಗೆ ಬಂದಿದ್ದ ಭತ್ತ ಸಂಪೂರ್ಣ ನೆಲಕ್ಕಚ್ಚಿದೆ. ಕಟಾವು ಮಾಡಿದ ಭತ್ತದ ರಾಶಿಗಳು ಮಳೆ ನೀರಿಗೆ ತೊಯ್ದು ಮೊಳಕೆಯೊಡದಿವೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಭತ್ತ ಬೆಳೆದ ರೈತರು ನೋವು ಅನುಭವಿಸುವಂತಾಗಿದೆ.

ತಾಲೂಕಿನಲ್ಲಿ ಒಟ್ಟು 815 ಹೆಕ್ಟೇರ್‌ನಲ್ಲಿ ಭತ್ತ, 7.7 ಹೆಕ್ಟೇರ್‌ನಲ್ಲಿ ಜೋಳ, 18.8ಹೆಕ್ಟೇರ್‌ ನಲ್ಲಿ ಸೂರ್ಯಕಾಂತಿ, 30.3ಹೆಕ್ಟೇರ್‌ನಲ್ಲಿ ಗೋವಿನಜೋಳ, 6.8ಹೆಕ್ಟೇರ್‌ನಲ್ಲಿ ಶೇಂಗಾ, 5.7ಹೆಕ್ಟೇರ್‌ನಲ್ಲಿ ಅವರೆ, 8.0ಹೆಕ್ಟೇರ್‌ನಲ್ಲಿ ಹತ್ತಿ ಸೇರಿ 892.3ಹೆಕ್ಟೇರ್‌ನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿ ಸುಮಾರ 1.25 ಕೋಟಿಗೂ ಅಧಿ ಕ ನಷ್ಟವಾಗಿದೆ. ಹಾನಿಗೊಳಗಾದ ಜಮೀನುಗಳಿಗೆ ಶುಕ್ರವಾರ ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ನಡೆಸಿದರು.

ತಾಲೂಕಿನ ಕವಲೆತ್ತು, ಕೋಡಿಯಾಲ, ಮುದೆನೂರ, ನಾಗೇನಹಳ್ಳಿ, ಹೊಳೆಆನ್ವೇರಿ, ಕೋಟಿಹಾಳ, ತುಮ್ಮಿನಕಟ್ಟಿ, ಪತ್ಯಾಪುರ, ಗುಡಗೂರ, ಮೈದೂರ, ಚಿಕ್ಕಕುರವತ್ತಿ, ಚೌಡಯ್ಯದಾನಪುರ, ಗಂಗಾಪುರ, ಕಾಕೋಳ, ಹೂಲಿಹಳ್ಳಿ, ಕರೂರು, ಚಳಗೇರಿ, ಮಾಕನೂರ, ನದಿಹರಳಳ್ಳಿ, ಮೆಡ್ಲೆರಿ, ಐರಣಿ, ಸೋಮಲಾಪುರ, ಹಿರೇಬಿದರಿ, ಕೋಣನತಂಬಿಗಿ, ಉದಗಟ್ಟಿ, ಹೀಲದಹಳ್ಳಿ, ಬೇಲೂರ, ಕೆರೆಮಲ್ಲಾಪುರ, ಚಿಕ್ಕಹರಳಳ್ಳಿ, ದೇವರಗುಡ್ಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುರಿದ ಅಕಾಲಿಕ ಮಳೆಗೆ 892.3 ಹೆಕ್ಟೇರ್‌ ಬೆಳೆ ನಷ್ಟವಾಗಿ ಸುಮಾರ 1.25 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಹೀತೇಂದ್ರ ಗೌಡಪ್ಪಳವರ “ಉದಯವಾಣಿ’ಗೆ ತಿಳಿಸಿದ್ದಾರೆ.

ತಾಲೂಕಿನ ಮಾಕನೂರ ಗ್ರಾಮದಲ್ಲಿ ಬತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ನಷ್ಟ ಅನುಭವಿಸಿದ ರೈತರು ಭತ್ತದ ಬೆಳೆಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

Advertisement

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ನಗರದ 1ಮನೆ, ಗ್ರಾಮೀಣ ಭಾಗದ ಇಟಗಿ 1, ಕುದರಿಹಾಳ ಗ್ರಾಮದ 1, ದೇವರಗುಡ್ಡದ 2, ಕವಲೆತ್ತ ಗ್ರಾಮದ 2 ಮನೆ ಸೇರಿ ಒಟ್ಟು ಸುಮಾರು 7 ಮನೆಗಳು ಭಾಗಶಃ ಬಿದ್ದಿರುವ ವರದಿಯಾಗಿದೆ. ಇನ್ನೂ ಮಳೆ ಮುಂದುವರೆದಿದ್ದು, ಇದರ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.
ಶಂಕರ ಜಿ.ಎಸ್‌., ತಹಶೀಲ್ದಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next