ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 8778 ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಇಂದು ( ಏಪ್ರಿಲ್ 13) ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ:12.04.2021,00:00 ರಿಂದ 23:59ರವರೆಗೆ) ಅವಧಿಯಲ್ಲಿ 8778 ಕೋವಿಡ್ ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 78617ಕ್ಕೆ ಏರಿಕೆಯಾಗಿದೆ. ಇದೆ ಅವಧಿಯಲ್ಲಿ 6079 ಜನರು ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್ ಸೋಂಕಿನಿಂದ 67 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತರಾದವರ ಸಂಖ್ಯೆ 13008ಕ್ಕೆ ತಲುಪಿದೆ.
ಜಿಲ್ಲಾವಾರು ಕೋವಿಡ್-19 ಪ್ರಕರಣಗಳು
ಬಾಗಲಕೋಟೆ -73, ಬಳ್ಳಾರಿ-168 ,ಬೆಳಗಾವಿ-42 ,ಬೆಂಗಳೂರು ಗ್ರಾಮಾಂತರ- 163, ಬೆಂಗಳೂರು ನಗರ -5500, ಬೀದರ್ -198, ಚಾಮರಾಜನಗರ -51, ಚಿಕ್ಕಬಳ್ಳಾಪುರ- 114, ಚಿಕ್ಕಮಗಳೂರು-19, ಚಿತ್ರದುರ್ಗ -45, ದಕ್ಷಿಣ ಕನ್ನಡ -142, ದಾವಣಗೆರೆ -66, ಧಾರವಾಡ -132, ಗದಗ -30, ಹಾಸನ-150, ಹಾವೇರಿ-17, ಕಲಬುರಗಿ -290, ಕೊಡಗು-14, ಕೋಲಾರ -67, ಕೊಪ್ಪಳ -29, ಮಂಡ್ಯ-114 , ಮೈಸೂರು -492, ರಾಯಚೂರು-80, ರಾಮನಗರ-37, ಶಿವಮೊಗ್ಗ 95, ತುಮಕೂರು 350, ಉಡುಪಿ-75, ಉತ್ತರ ಕರ್ನಾಟಕ- 75, ವಿಜಯಪುರ -105,ಯಾದಗಿರಿ-45.