ನೆಲಮಂಗಲ: ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ 850 ಕೋಟಿ ರೂ. ಅನುದಾನ ತಂದು ನಗರ ಸೇರಿಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದುಮಾಜಿ ಶಾಸಕ ಎಂ.ವಿ.ನಾಗರಾಜು ತಿಳಿಸಿದರು.
ತಾಲೂಕಿನ ಟಿ.ಬೇಗೂರು ಗ್ರಾಪಂನ ಬೈರನಹಳ್ಳಿ ಗ್ರಾಮಕ್ಕೆ ಬಿಎಂಟಿಸಿ ಬಸ್‌ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ,ಕ್ಷೇತ್ರದ ಅಭಿವೃದ್ಧಿಗೆ ಹಾಲಿ ಶಾಸಕರು 25ಕೋಟಿ ರೂ. ಅನುದಾನ ತಂದರೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ 30 ಕೋಟಿರೂ. ಅನುದಾನ ತಂದು ನೆಲಮಂಗಲ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.
ತಾವು ತಂದ ಅನುದಾನದ ಕಾಮಗಾರಿಗೆ ಪೂಜೆ ಮಾಡಿ, ಶಾಸಕರು ನಮ್ಮ ಶ್ರಮ ಎನ್ನುತ್ತಾರೆ. ಹತ್ತು ವರ್ಷಜೆಡಿಎಸ್‌ನ ಹಾಲಿ ಶಾಸಕರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ, ನನಗೆ ಅಧಿಕಾರವಿಲ್ಲದಿದ್ದರೂ ಪ್ರಸಕ್ತ ವರ್ಷಗಳಲ್ಲಿ 30 ಕೋಟಿ ರೂ. ಅನುದಾನ ತಂದಿದ್ದೇನೆ. ಹಾಲಿ ಶಾಸಕ ಶ್ರೀನಿವಾಸಮೂರ್ತಿ ನಮ್ಮ ಬಿಜೆಪಿಸರ್ಕಾರ ನೀಡಿದ ಅನುದಾನ ನಮ್ಮದೇ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಮುಂದಿನ ಬಾರಿ ಬಿಜೆಪಿಗೆ ಅಧಿಕಾರ ನೀಡಿದರೆ ಕೆರೆಗಳಿಗೆ ನೀರು ತುಂಬಿಸುವುದು, ಸೋಂಪುರದವರೆಗೂ ಮೆಟ್ರೋ ತರುವ ಮೂಲಕ ನಗರಕ್ಕೆ ಒಳಚರಂಡಿ, ನೀರಿನ ವ್ಯವಸ್ಥೆ ಮಾಡುತ್ತೇನೆ ಎಂದರು.
ದೇವರಾಜ ಅರಸು ಅಭಿವೃದ್ಧಿ ನಿಗಮದ ಸದಸ್ಯ ಬಿ.ಕೆ.ಚಿಕ್ಕಹನುಮಯ್ಯ ಮಾತನಾಡಿ, ನಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥೆಯಿಂದ ಬಹಳಷ್ಟು ಅನುಕೂಲವಾಗಿದೆ. ಸೌಲಭ್ಯಕ್ಕೆ ಸಹಕರಿಸಿದ ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ಬೈರನಹಳ್ಳಿ ಗ್ರಾಮದಿಂದ ನೂರಾರು ಜನರು, ವಿದ್ಯಾರ್ಥಿಗಳು ನೆಲಮಂಗಲ, ಬೆಂಗಳೂರು, ತುಮಕೂರಿಗೆ ಸಂಚಾರ ಮಾಡುತ್ತಾರೆ. ಬಿಎಂಟಿಸಿ ನಿರ್ದೇಶಕ ಬೃಂಗೇಶ್ ಸಹಕಾರದೊಂದಿಗೆ ಬಸ್ ವ್ಯವಸ್ಥೆ ಮಾಡಿಸಲಾಗಿದ್ದು, ಮಾಜಿ ಶಾಸಕ ಎಂ.ವಿ ನಾಗರಾಜು ಚಾಲನೆ ನೀಡಿದ್ದಾರೆ ಎಂದರು.
ಎನ್‌ಪಿಎ ಅಧ್ಯಕ್ಷ ಮಲ್ಲಯ್ಯ, ಬಿಜೆಪಿ ಮುಖಂಡ ಎಂ.ಎಂ.ಗೌಡ, ಗ್ರಾಪಂ ಸದಸ್ಯರಾದ ವೆಂಕಟೇಶ್, ರತ್ನಮ್ಮ ಮುನಿರಾಜು, ಮುಖಂಡರಾದ ಮೂರ್ತಿ, ಶಿವಾಜಿರಾವ್, ಮನು, ಮಹಿಳಾ ಘಟಕ ಜಿಲ್ಲಾ ಕಾರ್ಯದರ್ಶಿ ಲತಾ, ಬಿಎಂಟಿಸಿ ಅಧಿಕಾರಿ ಮಂಜಮ್ಮ, ಗ್ರಾಪಂ ಮಾಜಿ ಸದಸ್ಯರಾದ ಹನುಮಯ್ಯ, ಮಾಯಣ್ಣಗೌಡ, ಮುನಿಯಪ್ಪ, ಕಟ್ಟಿಮನೆ ಯಜಮಾನ ಶ್ರೀನಿವಾಸ್, ಅಶ್ವತ್ಥಯ್ಯ, ನಾರಾಯಣ್,ವೆಂಕಟೇಶ್,ರಾಜಣ್ಣ, ನರಸಯ್ಯ, ಹನುಮಂತಯ್ಯ, ಶಿವಣ್ಣ,ಗ್ರಾಮಸ್ಥರು ಮತ್ತಿತರರಿದ್ದರು.