Advertisement

ಚಾಮರಾಜನಗರ: 85 ಹೊಸ ಕೋವಿಡ್ 19 ಪ್ರಕರಣ ಪತ್ತೆ, 55 ಮಂದಿ ಗುಣಮುಖ

07:04 PM Sep 02, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 85 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.

Advertisement

55 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 535 ಸಕ್ರಿಯ ಪ್ರಕರಣಗಳಿವೆ.

ಚಾಮರಾಜನಗರ ತಾಲೂಕಿನಿಂದ 28, ಗುಂಡ್ಲುಪೇಟೆ 24, ಕೊಳ್ಳೇಗಾಲ 25, ಯಳಂದೂರು 07, ಹನೂರು ತಾಲೂಕಿನಲ್ಲಿ 01 ಪ್ರಕರಣಗಳು ವರದಿಯಾಗಿವೆ.

ಇದುವರೆಗೆ ಜಿಲ್ಲೆಯಲ್ಲಿ 2491 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 1907 ಮಂದಿ ಗುಣಮುಖರಾಗಿದ್ದಾರೆ.

15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 161 ಮಂದಿ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ.

Advertisement

ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಒಟ್ಟು 49 ಮಂದಿ ಮೃತಪಟ್ಟಿದ್ದಾರೆ.

ಬುಧವಾರ 916 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 831 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.

ಇಂದಿನ ಪ್ರಕರಣಗಳು-85

ಇಂದು ಗುಣಮುಖ-55

ಒಟ್ಟು ಗುಣಮುಖ-1907

ಇಂದಿನ ಸಾವು-00

ಒಟ್ಟು ಸಾವು-49

ಸಕ್ರಿಯ ಪ್ರಕರಣಗಳು-535

ಒಟ್ಟು ಸೋಂಕಿತರು-2491

Advertisement

Udayavani is now on Telegram. Click here to join our channel and stay updated with the latest news.

Next