Advertisement

ಕೇವಲ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದ ಕೇರಳದ 84 ವರ್ಷದ ವೃದ್ದೆ

05:01 PM Sep 18, 2021 | Team Udayavani |

ತಿರುವನಂತಪುರಂ : ಮೊದಲ ಡೋಸ್ ಕೋವಿಡ್ ಲಸಿಕೆ ಪಡೆಯಲು ಹೋದ 84 ವರ್ಷದ ವೃದ್ಧೆಗೆ ಕೇವಲ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

Advertisement

ಈ ಘಟನೆ ನಡೆದಿರುವುದು ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ.

ಘಟನೆಯ ವಿವರ :
ಎರ್ನಾಕುಲಂ ಜಿಲ್ಲೆಯ ತಂದಮ್ಮ ಪಪ್ಪು ಎಂಬ 84 ವರ್ಷದ ವೃದ್ದೆ ಕೋವಿಡ್ ಮೊದಲ ಲಸಿಕೆ ಪಡೆಯಲೆಂದು ತನ್ನ ಮಗನೊಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ, ಈ ವೇಳೆ ಲಸಿಕಾ ಕೇಂದ್ರದಲ್ಲಿ ಲಸಿಕೆ ಕೊಡುವ ಮೊದಲು ನಡೆಯುವ ಎಲ್ಲ ಪ್ರಕ್ರೀಯೆಗಳನ್ನು ನಡೆಸಿ ಲಸಿಕೆ ಪಡೆಯಲು ಕೊಠಡಿಗೆ ಕಳುಹಿಸಿದ್ದಾರೆ. ಅಲ್ಲಿರುವ ಸಿಬ್ಬಂದಿಗಳು ವೃದ್ಧೆಗೆ ಲಸಿಕೆ ನೀಡಿ 30 ನಿಮಿಷಗಳ ಕಾಲ ವಿಶ್ರಾಂತಿ ಕೊಠಡಿಯಲ್ಲಿ ತಂಗಲು ಹೇಳಿದ್ದಾರೆ ಅವರ ಹೇಳಿಕೆಯಂತೆ ವೃದ್ದೆ ವಿಶ್ರಾಂತಿ ಕೊಠಡಿಯಲ್ಲಿ 30 ನಿಮಿಷ ಇದ್ದು ಬಳಿಕ ಮಗನನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ವೃದ್ದೆ ಲಸಿಕೆ ಪಡೆದ ಕೊಠಡಿಯ ಬಳಿ ಪಾದರಕ್ಷೆಯನ್ನು ಬಿಟ್ಟು ಬಂದಿರುವುದು ಗಮನಕ್ಕೆ ಬಂದಿದೆ. ಈ ವೇಳೆ ವೃದ್ದೆ ಮಗನಲ್ಲಿ ನಾನು ಪಾದರಕ್ಷೆ ಬಿಟ್ಟು ಬಂದಿದ್ದೇನೆ ಹೋಗಿ ತರುತ್ತೇನೆಂದು ಲಸಿಕಾ ಕೊಠಡಿಯ ಬಳಿ ಬಂದ ವೃದ್ದೆ ಪಾದರಕ್ಷೆ ಹಾಕುತ್ತಿದ್ದ ವೇಳೆ ಕೊಠಡಿಯ ಒಳಗಿದ್ದ ಅರೋಗ್ಯ ಸಿಬ್ಬಂದಿ ವೃದ್ದೆ ಲಸಿಕೆ ಪಡೆಯಲು ಬಂದಿದ್ದಾರೆ ಎಂದುಕೊಂಡು ಪಾದರಕ್ಷೆ ಬಿಟ್ಟು ಒಳಗೆ ಬನ್ನಿ ಎಂದು ಕರೆದಿದ್ದಾರೆ.

ಇದನ್ನೂ ಓದಿ :ಚುನಾವಣೆಗೂ ಮುನ್ನವೇ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ರಾಜೀನಾಮೆ

ಅರೋಗ್ಯ ಸಿಬ್ಬಂದಿ ಕರೆದರೆಂದು ಕೊಠಡಿಯ ಒಳಗೆ ಹೋದ ವೃದ್ಧೆಯನ್ನು ಸಿಬ್ಬಂದಿಗಳು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಏನೋ ಹೇಳಲು ಕರೆದಿದ್ದಾರೆ ಎಂದು ಕುರ್ಚಿಯಲ್ಲಿ ಕುಳಿತ ವೃದ್ಧೆಗೆ ಇನ್ನೋರ್ವ ಅರೋಗ್ಯ ಸಿಬ್ಬಂದಿ ಬಂದು ಲಸಿಕೆ ನೀಡಿದ್ದಾರೆ, ಅಷ್ಟೋತ್ತಿಗೆ ವೃದ್ದೆ ನಾನೂ ಈಗಾಗಲೇ ಲಸಿಕೆ ಪಡೆದಾಗಿದೆ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ. ವಿಚಾರ ಗೊತ್ತಾದ ಬಳಿಕ ಅರೋಗ್ಯ ಸಿಬ್ಬಂದಿಗಳು ವೃದ್ಧೆಯನ್ನು ಒಂದು ಗಂಟೆಗಳ ಕಾಲ ತಪಾಸಣೆ ನಡೆಸಿ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಾದ ಬಳಿಕ ಮನೆಗೆ ಕಳುಹಿಸಿದ್ದಾರೆ.

Advertisement

ಅಚಾತುರ್ಯದಿಂದ ಆದ ಘಟನೆಯಿಂದ ಭೀತಿಗೊಂಡ ಅರೋಗ್ಯ ಸಿಬ್ಬಂದಿಗಳು ಪ್ರತಿ ಗಂಟೆಗೊಮ್ಮೆ ವೃದ್ಧೆಯ ಅರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ, ಅದೃಷ್ಟವಶಾತ್ ವೃದ್ದೆಯ ಆರೋಗ್ಯ ಉತ್ತಮವಾಗಿದ್ದು ನಾನು ಆರೋಗ್ಯವಾಗಿ ಇದ್ದೇನೆ ತಂದಮ್ಮ ಪಪ್ಪು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next