Advertisement

ನೆರೆ ರಾಜ್ಯಗಳಿಗೆ 831.53 ಮಿ.ಯೂ. ವಿದ್ಯುತ್‌ ಮಾರಾಟ

11:53 PM May 16, 2022 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಬೇಸಗೆಯಲ್ಲಿ ವಿದ್ಯುತ್‌ ಅಭಾವ ಎದುರಿಸುತ್ತಿದ್ದ ಕರ್ನಾಟಕ, ಈ ಬಾರಿ ಹೆಚ್ಚುವರಿ ಉತ್ಪಾದನೆ ಮಾಡುವುದರ ಜತೆಗೆ ನೆರೆ ರಾಜ್ಯಗಳಿಗೆ ನೂರಾರು ಮಿಲಿಯನ್‌ ಯೂನಿಟ್‌ ಮಾರಾಟ ಮಾಡಿ ಕೋಟ್ಯಂತರ ರೂ. ಆದಾಯ ಗಳಿಸಿದೆ.

Advertisement

2022-23ನೇ (ಮೇ 15ರವರೆಗೆ) ಸಾಲಿನಲ್ಲಿ 764.23 ಕೋಟಿ ಮೊತ್ತದ 831.24 ಮಿ.ಯೂ. ವಿದ್ಯುತ್‌ ಅನ್ನು ಮಾರಾಟ ಮಾಡಿದೆ. ಪ್ರತೀ ಯೂನಿಟ್‌ಗೆ ಸರಾಸರಿ 9.19 ರೂ.ಗಳಂತೆ ಮಾರಾಟ ಮಾಡಿದ್ದು, ಇದರಲ್ಲಿ ಸಾಂಪ್ರದಾಯಿಕ ಮತ್ತು ನವೀಕರಿಸಬಹುದಾದ ಎರಡೂ ಪ್ರಕಾರದ ಇಂಧನ ಸೇರಿದೆ.

ಒಟ್ಟಾರೆ ಮಾರಾಟ ಆಗಿದ್ದರಲ್ಲಿ ಒಂದು ದಿನಕ್ಕೆ (ಡೇ ಅಹೆಡ್‌ ಮಾರ್ಕೆಟ್‌), ಪ್ರತೀ ಗಂಟೆಗೆ (ರಿಯಲ್‌ ಟೈಮ್‌ ಮಾರ್ಕೆಟ್‌) ಹಾಗೂ ದಿನವಹಿ ಅಥವಾ ಮುಂದಿನ ವಾರದ (ಟರ್ಮ್ ಅಹೆಡ್‌ ಮಾರ್ಕೆಟ್‌) ವಿಭಾಗಗಳಲ್ಲೇ 638.23 ಕೋಟಿ ರೂ. ಮಾರಾಟ ಮಾಡಿದ್ದು, ಕ್ರಮವಾಗಿ 264.64 ಮಿ.ಯೂ., 182 ಮಿ.ಯೂ. ಹಾಗೂ 264.21 ಮಿ.ಯೂ. ಮಾರಾಟವಾಗಿದೆ.

ಪ್ರಮುಖವಾಗಿ ತಮಿಳುನಾಡು, ಒರಿಸ್ಸಾದ ವೇದಾಂತ, ಕೊಲ್ಕತ್ತ, ಬಿಹಾರ, ದಿಲ್ಲಿ, ಭಾರತ್‌ ಅಲ್ಯೂಮಿನಿಯಂ ವಿದ್ಯುತ್‌ ಅನ್ನು ಖರೀದಿಸಿದೆ.ಎಪ್ರಿಲ್‌ನಲ್ಲಿ ಬೇಸಗೆಯಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿತ್ತು. ಕೇಂದ್ರದಿಂದ ಕಲ್ಲಿದ್ದಲು ಪೂರೈಕೆ ಕೊರತೆಯಾಗಿದ್ದರಿಂದ 119.60 ಮಿ.ಯೂ.ನಷ್ಟು ವಿದ್ಯುತ್‌ ಅನ್ನು ಸರಾಸರಿ ಪ್ರತೀ ಯೂನಿಟ್‌ಗೆ 10.18 ರೂ.ಗಳಂತೆ ಒಟ್ಟು 121.79 ಕೋಟಿ ರೂ. ಮೊತ್ತದಷ್ಟು ವಿದ್ಯುತ್‌ ವಿನಿಮಯ ಕೇಂದ್ರದ ಮೂಲಕ ಖರೀದಿ ಮಾಡಲಾಗಿದೆ ಎಂದು ಪಿಸಿಕೆಎಲ್‌ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next