Advertisement

81 ಸಾವಿರ ಎಫ್ಬಿ ಖಾತೆಗಳು ಹ್ಯಾಕ್‌!

06:00 AM Nov 04, 2018 | Team Udayavani |

ವಾಷಿಂಗ್ಟನ್‌: ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ನ 12 ಕೋಟಿ ಖಾತೆಗಳು ಹ್ಯಾಕ್‌ ಆಗಿದ್ದು, ಬಳಕೆದಾರರ ವೈಯಕ್ತಿಕ ಸಂದೇಶಗಳು ಹಾಗೂ ಇತರ ಮಾಹಿತಿ ಹ್ಯಾಕರ್‌ಗಳ ಪಾಲಾಗಿದೆ ಎಂದು ಬಿಬಿಸಿ ಸುದ್ದಿ ಸಂಸ್ಥೆಯ ರಷ್ಯಾ ವೆಬ್‌ಸೈಟ್‌ನಲ್ಲಿ ವರದಿ ಮಾಡಲಾಗಿದೆ.

Advertisement

ಈ ಪೈಕಿ 81 ಬಳಕೆದಾರರ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಬಹಿರಂಗ ಗೊಳಿಸಿದ್ದಾರೆ. ಎಫ್ಬಿ ಸೇಲರ್‌ ಎಂಬ ಹೆಸರಿನ ಹ್ಯಾಕರ್‌ ಕಳೆದ ಸೆಪ್ಟಂಬರ್‌ನಲ್ಲಿ ಹ್ಯಾಕ್‌ ಮಾಡಿರುವುದಾಗಿ ಹೇಳಿಕೊಂಡಿದ್ದ. ಈ ಡೇಟಾವನ್ನೇ ಈಗ ಬಿಡುಗಡೆ ಮಾಡ ಲಾಗಿದೆ ಎಂದು ಹೇಳಲಾಗಿದೆ. ಇನ್ನೊಂ ದೆಡೆ ಈ ಬಗ್ಗೆ ವಿವರಣೆ ನೀಡಿರುವ ಫೇಸ್‌ಬುಕ್‌, ಈ ಡೇಟಾ ಹ್ಯಾಕ್‌ ಆಗಿಲ್ಲ. ಬದಲಿಗೆ ಹ್ಯಾಕರ್‌ಗಳು ಬ್ರೌಸರ್‌ ಎಕ್ಸ್‌ಟೆನನ್‌ಗಳನ್ನು ಬಳಸಿ ದುರುದ್ದೇಶಪೂರ್ವಕವಾಗಿ ಬಳಕೆ ದಾರರ ಅರಿವಿಗೆ ಬಾರದಂತೆ ಕದ್ದಿದ್ದಾರೆ. ಇತರ ಬಳಕೆದಾರರ ಖಾತೆಗಳಿಗೆ ಇದರಿಂದ ಬಾಧೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ ಬ್ರೌಸರ್‌ ಕಂಪನಿಯನ್ನು ಸಂಪರ್ಕಿಸಿ ಈ ಬ್ರೌಸರ್‌ ಎಕ್ಸ್‌ಟೆನನ್‌ಗೆ ಅನುಮತಿ ನೀಡದಿರುವಂತೆ ಕೋರಿದ್ದೇವೆ ಎಂದಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next