Advertisement

ಆಧಾರ್‌ ಕಾರ್ಡಿಂದ 80 ಸಾವಿರ ನಕಲಿ ಪ್ರಾಧ್ಯಾಪಕರ ಪತ್ತೆ

09:25 AM Jan 06, 2018 | Karthik A |

ಹೊಸದಿಲ್ಲಿ: ದೇಶದ ವಿವಿಧ  ಕಾಲೇಜುಗಳು ಮತ್ತು ವಿವಿಗಳಲ್ಲಿ 80 ಸಾವಿರ ನಕಲಿ ಪ್ರಾಧ್ಯಾಪಕರನ್ನು ಪತ್ತೆ ಮಾಡಲಾಗಿದೆ. ಅದೂ ಆಧಾರ್‌ ಕಾರ್ಡ್‌ ಬಳಕೆ ಮಾಡಿ! ಈ ಮಾಹಿತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ನೀಡಿದ್ದಾರೆ. ಕೇಂದ್ರೀಯ ವಿವಿಗಳಲ್ಲಿ ಇಂಥ ಪ್ರಕರಣಗಳು ಪತ್ತೆಯಾಗಿಲ್ಲ ಎಂದಿದ್ದಾರೆ. ಜತೆಗೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕೆಲವು ಮಂದಿ ಬೇರೆ ಬೇರೆ ಹೆಸರಿನಲ್ಲಿ ಹಲವು ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ನಿರತರಾಗಿದ್ದರು. ಪ್ರಾಧ್ಯಾಪಕರ ಜತೆಗೆ ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳಿಗೂ ಆಧಾರ್‌ ಸಂಖ್ಯೆ ನೀಡಲು ಸೂಚಿಸಲಾಗಿದೆ. ಈ ಮೂಲಕ ಒಂದಕ್ಕಿಂತ ಹೆಚ್ಚಿನ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಸಾಧ್ಯ ಎಂದಿದ್ದಾರೆ ಸಚಿವ ಜಾವಡೇಕರ್‌. 

Advertisement

ದುರ್ಬಳಕೆಯೇ ಹೆಚ್ಚು: ಆಧಾರ್‌ ಮಾಹಿತಿ ಸೋರಿಕೆ ಆರೋಪ ಕುರಿತು ಮಾಹಿತಿದಾರ ಎಡ್ವರ್ಡ್‌ ಸ್ನೋಡೆನ್‌ ಟ್ವೀಟ್‌ ಮಾಡಿದ್ದು, ಬಹಿರಂಗವಾಗಿರುವ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next