Advertisement

800 ಪ್ರಯಾಣಿಕರಿಗೆ ಕೋವಿಡ್: ಸಮುದ್ರ ಮಧ್ಯೆ ಲಂಗರು ಹಾಕಿದ ‘ಮೆಜೆಸ್ಟಿಕ್ ಪ್ರಿನ್ಸೆಸ್’ಹಡಗು

03:57 PM Nov 12, 2022 | Team Udayavani |

ಸಿಡ್ನಿ: ಹಾಲಿಡೇ ಕ್ರೂಸ್‌ನಲ್ಲಿದ್ದ ಸುಮಾರು 800 ಮಂದಿ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಹಡಗನ್ನು ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಲಂಗರು ಹಾಕಲಾಗಿದೆ.

Advertisement

ಮೆಜೆಸ್ಟಿಕ್ ಪ್ರಿನ್ಸೆಸ್ ಹಡಗು ನ್ಯೂಜಿಲೆಂಡ್‌ನಿಂದ ಸುಮಾರು 4,600 ಪ್ರವಾಸಿಗರನ್ನು ಮತ್ತು ಸಿಬ್ಬಂದಿಗಳನ್ನು ಹೊತ್ತು ಸಾಗಿದ ಹಡಗಿನಲ್ಲಿ ಹೆಚ್ಚಿನ ಪ್ರವಾಸಿಗರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಕ್ರೂಸ್ ಆಪರೇಟರ್ ಕಾರ್ನಿವಲ್ ಆಸ್ಟ್ರೇಲಿಯಾದ ಅಧ್ಯಕ್ಷ ಮಾರ್ಗರೇಟ್ ಫಿಟ್ಜ್‌ಗೆರಾಲ್ಡ್ ಮಾತನಾಡಿ ಈ ಪ್ರವಾಸವು 12 ದಿನಗಳದ್ದಾಗಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವ ಕ್ಲೇರ್ ಒ’ನೀಲ್ ಶನಿವಾರ ಸಾರ್ವಜನಿಕರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.

ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರವಾಸಿಗರು ಆತಂಕಗೊಂಡಿದ್ದು ಇದರಿಂದ ಹಡಗಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಅಧಿಕಾರಿಗಳು ದಿನನಿತ್ಯದ ಪ್ರೋಟೋಕಾಲ್‌ಗಳನ್ನು ಹಾಕಿದ್ದಾರೆ ಮತ್ತು ಮೆಜೆಸ್ಟಿಕ್ ಪ್ರಿನ್ಸೆಸ್ ಹಡಗಿನಿಂದ ಪ್ರಯಾಣಿಕರನ್ನು ಹೇಗೆ ಸ್ಥಳಾಂತರಿಸುವುದು ಎಂಬುದನ್ನು ನಿರ್ಧರಿಸುವಲ್ಲಿ ನ್ಯೂ ಸೌತ್ ವೇಲ್ಸ್ ಹೆಲ್ತ್ ಮುಂದಾಳತ್ವ ವಹಿಸುತ್ತದೆ ಎಂದು ಕ್ಲೇರ್ ಓ’ನೀಲ್ ಹೇಳಿದ್ದಾರೆ.

ಇದನ್ನೂ ಓದಿ :24 ವರ್ಷಗಳ ಹಿಂದೆ ಮೃತಪಟ್ಟಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು! ಇಲ್ಲಿದೆ ನೋಡಿ ಅಸಲಿ ಕತೆ 

Advertisement

ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಕ್ರೂಸ್ ಹಡಗು ಸಿಬ್ಬಂದಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಂಸ್ಥೆ ಹೇಳಿದೆ. ಆಸ್ಟ್ರೇಲಿಯಾದಲ್ಲಿಯೂ ಕೋವಿಡ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಕಂಪನಿಯ ಅಧ್ಯಕ್ಷ ಮಾರ್ಗರೇಟ್ ಫಿಟ್ಜ್‌ಗೆರಾಲ್ಡ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next