Advertisement

Japan 800 ಅಡಿ ಕರಾವಳಿ ಬದಲಿಸಿದ ಭೂಕಂಪ!

12:04 AM Jan 16, 2024 | Vishnudas Patil |

ಟೋಕಿಯೊ: ಜಪಾನ್‌ನಲ್ಲಿ ಹೊಸ ವರ್ಷದ ದಿನ ಸಂಭವಿಸಿದ ಪ್ರಬಲ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಆ ದೇಶದ ಕರವಾಳಿಯನ್ನು 800 ಅಡಿಗಳಷ್ಟು ಬದಲಾಯಿಸಿದೆ. ಹೊಸ ಉಪಗ್ರಹ ಚಿತ್ರಗಳಿಂದ ಇದು ಸಾಬೀತಾಗಿದೆ. ಫೋಟೋಗಳಲ್ಲಿ ನೆಲದ ಮಟ್ಟವು ಏರಿದ ಪ್ರದೇಶವಾಗಿ ಬದಲಾಗಿದ್ದು, ಈ ಹಿಂದೆ ನೀರಿನ ಅಡಿಯಲ್ಲಿದ್ದ ಭೂಮಿಯು ಬಯಲಾಗಿ ಕಂಡು ಬರುತ್ತಿದೆ. ಕರಾವಳಿಯುದ್ದಕ್ಕೂ 10ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಗಮನಾರ್ಹವಾಗಿ ಭೂಮಿ ಉನ್ನತಿಯಲ್ಲಿರುವುದು ಪತ್ತೆಯಾಗಿದೆ. ಜ.1ರಂದು ನೋಟೊ ಪೆನಿನ್ಸುಲಾ ಬಳಿ 7.5 ತೀವ್ರತೆಯಲ್ಲಿ ಭೂಕಂಪ ಉಂಟಾಗಿ, 213 ಮಂದಿ ಸಾವನ್ನಪ್ಪಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next