Advertisement

‘ಭಾರತ ಬಿಟ್ಟು ತೊಲಗಿ ಚಳುವಳಿ’ಗೆ 80 ವರ್ಷ: ಕ್ವಿಟ್‌ ಇಂಡಿಯಾ ಸ್ಮರಿಸಿದ ಪ್ರಧಾನಿ ಮೋದಿ

09:26 PM Aug 09, 2022 | Team Udayavani |

ನವದೆಹಲಿ: ಸ್ವಾತಂತ್ರ್ಯ ಹೋರಾಟದ ಭಾಗವಾಗಿ “ಬ್ರಿಟೀಷರೇ, ಭಾರತ ಬಿಟ್ಟು ತೊಲಗಿ’ ಅಭಿಯಾನ ಆರಂಭಿಸಿ ಮಂಗಳವಾರಕ್ಕೆ 80 ವರ್ಷಗಳು ಪೂರ್ಣಗೊಂಡಿವೆ.

Advertisement

ಪ್ರಧಾನಿ ಮೋದಿ ಅವರು ಈ ಬಗ್ಗೆ ಟ್ವೀಟ್‌ ಮಾಡಿ “ಮಹಾತ್ಮ ಗಾಂಧಿ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟ ಬಲಗೊಳಿಸುವ ನಿಟ್ಟಿನಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದವರನ್ನು ಸ್ಮರಿಸುತ್ತೇನೆ. ಇದು ಇಡೀ ದೇಶವನ್ನೂ ಒಗ್ಗೂಡಿಸಿತು’ ಎಂದು ಬರೆದುಕೊಂಡಿದ್ದಾರೆ.

ಸೆ.7ಕ್ಕೆ ಶುರು:
ಕಾಂಗ್ರೆಸ್‌ ಆಯೋಜನೆ ಮಾಡಿರುವ ಭಾರತ್‌ ಜೋಡೋ ಪಾದಯಾತ್ರೆ ಸೆ.7ರಿಂದ ಶುರುವಾಗಲಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ 3,500 ಕಿಮೀ ದೂರ ಕ್ರಮಿಸಲಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next