Advertisement
ಇವರ ಹೆಸರು ನಂದ ಕಿಶೋರ್. ಇವರಿಗೀಗ 80 ವರ್ಷ. ಉತ್ತರ ಪ್ರದೇಶದ ರುದ್ರಾಪುರದ ನಾರಾಯಣಪುರ ಎಂಬ ಹಳ್ಳಿಯಲ್ಲಿ 1938ರಲ್ಲಿ ಜನಿಸಿದ್ದ ಇವರನ್ನು 1946ರಲ್ಲಿ ಈತನ ತಾಯಿ, ಪಾಕಿಸ್ತಾನದ ಅಬು ಅಹ್ಮದ್ ಎಂಬ ಜಮೀನ್ದಾರರ ಮನೆಗೆಲಸಕ್ಕೆ ಕಳುಹಿಸಿದ್ದರು. ಆಗಿನ್ನೂ ಅವರಿಗೆ ಕೇವಲ 8 ವರ್ಷ.
ಪಾಕಿಸ್ತಾನದ ಪೌರತ್ವ ಪಡೆದಿದ್ದರು. ಆದರೆ, ದೈಹಿಕವಾಗಿ ಅಲ್ಲಿದ್ದರೂ, ಮನಸ್ಸು ಭಾರತದಲ್ಲೇ ಇತ್ತು. ಹಠ ತೊಟ್ಟು ಆತ 1965ರಲ್ಲಿ ಉತ್ತರ ಪ್ರದೇಶದ ತನ್ನ ಹಳ್ಳಿಗೆ ಹಿಂದಿರುಗಿದರು. ಇಲ್ಲೇ ಉಳಿಯಬೇಕೆಂದು ಪ್ರಯತ್ನಿಸಿದರು. ಅವರ ಪಾಕಿಸ್ತಾನಿ ಪೌರತ್ವ ಹಾಗೂ ಅವರು ಹೊಂದಿದ್ದ ಪಾಸ್‌ಪೋರ್ಟ್ ಅವರಿಗೆ ಅಡ್ಡಿಯಾಯಿತು. ಇವರ ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾನವೀಯ ದೃಷ್ಟಿಯಿಂದ 1974ರಿಂದ 1998ರವರೆಗೆ ವೀಸಾ ಅವಧಿ ವಿಸ್ತರಿಸಲಾಗಿದೆ. ಆದರೆ, ಇಲ್ಲೇ ಶಾಶ್ವತವಾಗಿ ನೆಲೆಸಲು ಅನುಮತಿ ಸಿಕ್ಕಿಲ್ಲ. ಕೇಂದ್ರ ಕೆಂಗಣ್ಣು ಬಿಟ್ಟರೆ ನಾಳೆಯೇ ಅವರು ಜಾಗ ಖಾಲಿ ಮಾಡಬೇಕು. ಇದೇ ಆತಂಕದಲ್ಲಿ ಅವರೀಗ ದಿನದೂಡುತ್ತಿದ್ದಾನೆ.