ಬೆಂಗಳೂರು: ರಾಜ್ಯದ 16 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂ ಕು ಎಂದು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಗೃಹ ಕಚೇರಿ ಕೃಷ್ಞಾದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ 6000 ಕೋಟಿ ರೂ. ನಷ್ಟದ ಅಂದಾಜು ಮಾಡಿದ್ದು, 3000 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಧಾನಿ ರಾಜ್ಯಕ್ಕೆ ಕಳುಹಿಸಿದ್ದು, ವಸ್ತು ಸ್ಥಿತಿ ಅವಲೋಕಿಸಲಿದ್ದಾರೆ. ರಾಷ್ಟ್ರೀಯ ವಿಪತ್ತು ಘೋಷಣೆ ಬಗ್ಗೆ ಇನ್ನು ಎರಡು ಮೂರು ದಿನ ಅವಲೋಕಿಸಿ ಮನವಿಗೆ ಚಿಂತಿಸಲಾಗುವುದು ಎಂದು ಹೇಳಿದರು.
ಸಿಆರ್ ಪಿಎಫ್ ನ 3000 ಸಿಬಂದಿ ನೇಮಕ ಪ್ರಕ್ರಿಯೆ ಮುಂದೂಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.
ಸರಕಾರಿ ನೌಕರರಿಂದ 150 ಕೋಟಿ ರೂ. ದೇಣಿಗೆ;
ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ 150 ಕೋಟಿ ರೂ., ನಿಗಮ, ಮಂಡಳಿ ಇತರೆ ನೌಕರರ ಒಂದು ದಿನದ ವೇತನ 50 ಕೋಟಿ ರೂ., ಪೊಲೀಸ್, ಸಾರಿಗೆ ಇಲಾಖೆ ನೌಕರರ ಒಂದು ದಿನದ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.