ಪಾವಗಡ: ಪ್ಲಾಸ್ಟಿಕ್ ಬಳಕೆ ನಿಷೇಧ ತಾಲೂಕಿನಲ್ಲಿ ಜಾರಿಯಾಲ್ಲಿದ್ದರೂ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ. ದಂಡ, ಎಚ್ಚರಿಕೆ ನಡುವೆಯೂ ಪಟ್ಟಣ ಹೊರತುಪಡಿಸಿ ಉಳಿದೆಡೆ ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಮೂಲಿಯಂತಿದೆ.
2016ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲಾಯಿ ತಾದರೂ ಸಮರ್ಪಕವಾಗಿ ಜಾಗೃತಿ ಮೂಡಿಸುವಲ್ಲಿ ಸರ್ಕಾರ ವಿಫಲ ವಾಯಿತು. ಪ್ರಧಾನಿ ನರೇಂದ್ರ ಮೋದಿ ಸ್ವತ್ಛಭಾರತ್‌ಗೆ ಚಾಲನೆ ನೀಡಿದ ಬಳಿಕ ಬದಲಾವಣೆ ನಿರೀಕ್ಷೆ ಮೂಡಿದ್ದರೂ ಸಾಧ್ಯವಾಗಲಿಲ್ಲ. ಅಲ್ಲದೇ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾ ಚರಣೆ ಪ್ರಯುಕ್ತ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿ ಯಾಗಿಅನುಷ್ಠಾನ ಗೊಳಿಸಲು ಸರ್ಕಾರ ಮುಂದಾಗಿದೆ.
ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸದೇ ಏಕಾಏಕಿ ನಿಷೇಧ ಸರಿಯಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪ್ಲಾಸ್ಟಿಕ್ ಕವರ್‌ಗಿಂತ ಬಟ್ಟೆ ಬ್ಯಾಗ್‌ಗೆ ಹೆಚ್ಚಿನ ದರವಿರು ವುದರಿಂದ ಜನರು ಪ್ಲಾಸ್ಟಿಕ್ ಬಳಕೆ ಬಿಟ್ಟಿಲ್ಲ. ಹಳ್ಳಿ ಜನರು ದಂಡಕ್ಕೆ ಹೆದರಿ ಬಟ್ಟೆ ಬ್ಯಾಗ್ ತರುತ್ತಾರೆ. ಅದರೆ ವಿದ್ಯಾವಂತರು ಬಟ್ಟೆ ಬ್ಯಾಗ್ ಹೊರೆ ಯಾಗುತ್ತದೆ ಎಂದು ಪ್ಲಾಸ್ಟಿಕ್ ಬಳಸುತ್ತಾರೆ. ಸಣ್ಣ ವಸ್ತು ಖರೀದಿಸಿದರೂ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಸಿಕೊಂಡು ಬರುತ್ತಾರೆ.
ಪುರಸಭೆಯಿಂದ ಕಾರ್ಯಕ್ರಮ:ಪ್ಲಾಸ್ಟಿಕ್ ನಿಷೇಧ ಮಾಡುವ ನಿಟ್ಟಿನಲ್ಲಿ ಪುರಸಭೆ ಇತ್ತೀಚೆಗೆ ಅರಿವು ಕಾರ್ಯಕ್ರಮ ನಡೆಸಿತ್ತು. ಜೊತೆಗೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿ-ಮಳಿಗೆಗಳ ಮೇಲೆ ದಾಳಿ ನಡೆಸಿ ದಂಡ, ಎಚ್ಚರಿಕೆ ನೀಡಲಾಯಿತು. ವರ್ತಕರು ವಿರೋಧ ವ್ಯಕ್ತಪಡಿಸಿದರೂ ಪುರಸಭೆ ಅಧಿಕಾರಿಗಳು ಕೇರ್ ಮಾಡಿರಲಿಲ್ಲ. ಅಲ್ಲದೇ ಪ್ಲಾಸ್ಟಿಕ್ ಕೊಂಡೊಯ್ಯುವ ಸಾರ್ವಜನಿಕರ ವಿರುದ್ಧವೂ ದಂಡ ವಿಧಿಸಲಾಯಿತು. ಸಂಘ-ಸಂಸ್ಥೆಗಳ ಸಹಾಯದಿಂದ ಅರಿವು ಕಾರ್ಯಕ್ರಮ ನಡೆಸಲಾಯಿತು.
ಪ್ರತಿ ಯೊಂದು ಶಾಲಾ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿ ಗಳಿಗೆ ತಿಳಿವಳಿಕೆ ಮೂಡಿಸಲಾಗಿದೆ. ಇತ್ತೀಚೆಗೆ ಪಟ್ಟಣದಲ್ಲಿ ಪುರಸಭೆಯಿಂದ ಪ್ಲಾಸ್ಟಿಕ್ ಅಂತಿಮ ಶವಯಾತ್ರೆ ನಡೆಯಿತು. ಶಾಸಕ ವೆಂಕಟ ರಮಣಪ್ಪ, ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು. ಶವಯಾತ್ರೆ ನಡೆದ 7ನೇ ದಿನಕ್ಕೆ ಪ್ಲಾಸ್ಟಿಕ್ ತಿಥಿ ಊಟ ಏರ್ಪಡಿಸಿ 300ಕ್ಕೂ ಹೆಚ್ಚು ಜನರಿಗೆ ಬಾಡೂಟ ಬಡಿಸಲಾಯಿತು. ಪಾವಗಡ ಪಟ್ಟಣದಲ್ಲಷ್ಟೇ ಕಟ್ಟುನಿಟ್ಟಿನ ಕ್ರಮದಿಂದ ಶೇ.80ರಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆ. ಉಳಿದೆಡೆಯೂ ಈ ಬದಲಾವಣೆ ಆಗಬೇಕಿದೆ. ಪರಿಸರ ರಕ್ಷಣೆ ಮತ್ತು ಸ್ವತ್ಛತೆ ಯಶಸ್ವಿ ಯಾಗಲು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ಕಡಿಮೆ ಯಾಗಬೇಕು. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದ ವಸ್ತು ವಾಗಿದ್ದು, ಮಾರಾಣಾಂತಿಕ ಕಾಯಿಲೆಗಳಿಗೆ ಕಾರಣ ವಾಗಿದೆ. ಇದನ್ನು ಅರಿತು ಜನರು ಮನೆ ಯಿಂದಲೇ
ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ವಸ್ತು ಖರೀದಿಸಲು ಮನೆಯಿಂದಲೇ ಬಟ್ಟೆ ಬ್ಯಾಗ್ ತೆಗೆದುಕೊಂಡು ಹೋಗಬೇಕು. ಇದರಿಂದ ಪರಿಸರ ಉಳಿವು ಸಾಧ್ಯ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು.