Advertisement

ತನ್ನ ಪತಿ ಮೊದಲು ‘ಮಹಿಳೆ’ಯಾಗಿದ್ದ ಎಂದು ಪತ್ನಿಗೆ ತಿಳಿದಿದ್ದು ಎಂಟು ವರ್ಷಗಳ ಬಳಿಕ!

11:08 AM Sep 16, 2022 | Team Udayavani |

ವಡೋದರಾ: ತಾನು ಮದುವೆಯಾದ ಗಂಡನು ಗಂಡಸೇ ಅಲ್ಲ ಎಂದು ತಿಳಿದರೆ ಪತ್ನಿಗೆ ಹೇಗಾಗಬೇಡ! ಅಂತಹುದೇ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ. ತಾನು 2014 ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಂದು ಇದೀಗ ಮಹಿಳೆಗೆ  ಗೊತ್ತಾಗಿದೆ.

Advertisement

ವರದಿಯ ಪ್ರಕಾರ, ಮಹಿಳೆ ಬುಧವಾರ ಗೋತ್ರಿ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪತಿ ವಿರಾಜ್ ವರ್ಧನ್ ವಿರುದ್ಧ ವಂಚನೆ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಬಗ್ಗೆ ದೂರು ನೀಡಿರುವ ಆಕೆ, ಎಫ್‌ ಐಆರ್‌ ನಲ್ಲಿ ಅವರ ಕುಟುಂಬದ ಸದಸ್ಯರನ್ನೂ ಹೆಸರಿಸಿದ್ದಾಳೆ.

ಇದನ್ನೂ ಓದಿ:ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ನಕಲಿ ಆರ್ ಟಿಸಿಯಿಂದ ಭೂಮಿ ಮಾರಾಟ: ಆರು ಮಂದಿ ಬಂಧನ

ತಾನು ಮದುವೆಯಾದ ವಿರಾಜ್ ವರ್ಧನ್ ಈ ಹಿಂದೆ ‘ವಿಜೇತಾ’ ಆಗಿದ್ದ ಎಂದು ಮಹಿಳೆ ದೂರಿದ್ದಾರೆ. ಮೊದಲ ಪತಿ 2011 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ಬಳಿಕ ಒಂಬತ್ತು ವರ್ಷಗಳ ಹಿಂದೆ ವಿರಾಜ್ ವರ್ಧನ್ ಅವರನ್ನು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಭೇಟಿಯಾಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಅವರು ಫೆಬ್ರವರಿ 2014 ರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾದರು ಮತ್ತು ಹನಿಮೂನ್‌ ಗೆ ಕಾಶ್ಮೀರಕ್ಕೆ ಹೋಗಿದ್ದರು. “ಆದರೆ, ವಿರಾಜ್ ವರ್ಧನ್ ಅವರು ಲೈಂಗಿಕ ಕ್ರಿಯೆಯಿಂದ ದೂರವೇ ಉಳಿಯುತ್ತಿದ್ದರು. ಅವಳು ಅವನ ಮೇಲೆ ಒತ್ತಡ ಹೇರಿದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿದ್ದಾಗ ನಡೆದ ಅಪಘಾತದಲ್ಲಿ ತಾನು ಲೈಂಗಿಕ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ ಎಂದು ಅವನು ಹೇಳಿಕೊಂಡಿದ್ದಾನೆ, ”ಎಂದು ಎಫ್ಐಆರ್ ನಲ್ಲಿ 40 ವರ್ಷದ ದೂರುದಾರ ಮಹಿಳೆ ಹೇಳಿದ್ದಾರೆ.

Advertisement

ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಸರಿಯಾಗಲಿದೆ ಎಂದು ವಿರಾಜ್ ವರ್ಧನ್ ಪತ್ನಿಗೆ ಹೇಳಿದ್ದ. 2020ರ ಜನವರಿಯಲ್ಲಿ ತಾನು ದೇಹತೂಕ ಕಡಿಮೆ ಮಾಡಿಕೊಳ್ಳಬೇಕು, ಅದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲೆಂದು ಕೋಲ್ಕತ್ತಾಗೆ ತೆರಳಿದ್ದ. ಆದರೆ ಆತ ಅಲ್ಲಿ ಅವರು ಪುರುಷ ಅಂಗಗಳನ್ನು ಅಳವಡಿಸಲು ಲೈಂಗಿಕ ಬದಲಾವಣೆಯ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದ. ಈ ವಿಚಾರವನ್ನು ಬಳಿಕ ತನ್ನೊಂದಿಗೆ ಹೇಳಿಕೊಂಡಿದ್ದ ಎಂದು ಹೇಳಿದರು.

ಬಳಿಕ ಆತ ಅವನು ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆ ನಡೆಸಲು ಪ್ರಾರಂಭಿಸಿದ. ಅಲ್ಲದೆ ಇದರ ಬಗ್ಗೆ ಯಾರೊಂದಿಗಾದರೂ ಮಾತನಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next