Advertisement

ಮೊಬೈಲ್‌ ಸ್ಫೋಟಗೊಂಡು ಬಾಲಕಿ ಮೃತ್ಯು; ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆ

01:14 PM Apr 27, 2023 | Team Udayavani |

ತ್ರಿಶೂರ್:‌ ಇತ್ತೀಚೆಗೆ ಕೇರಳದ ತ್ರಿಶೂರ್‌ ನಲ್ಲಿ ಮೊಬೈಲ್‌ ಸ್ಪೋಟಗೊಂಡು ಬಾಲಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಇದೀಗ ಮೊಬೈಲ್‌ ಫೋನ್‌ ಕಂಪೆನಿ ಪ್ರತಿಕ್ರಿಯೆ ನೀಡಿದೆ.

Advertisement

ಘಟನೆ ವಿವರ: ಸೋಮವಾರ (ಎ.24 ರಂದು) ರಾತ್ರಿ 10:30 ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್‌ ನಲ್ಲಿ ಸಿನಿಮಾ ನೋಡುತ್ತಿರುವಾಗ ಮೊಬೈಲ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮುಖ,ಕೈಗೆ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಳು.

ಮೊಬೈಲ್‌ ನಲ್ಲಿ ವಿಡಿಯೋವನ್ನು ಹೆಚ್ಚಿನ ಸಮಯದಿಂದ ನೋಡುತ್ತಿದ್ದ ಪರಿಣಾಮ ಮೊಬೈಲ್‌ ನ ಬ್ಯಾಟರಿ ಬಿಸಿಯಾಗಿದೆ ಇದರಿಂದ ಮೊಬೈಲ್‌ ಸ್ಫೋಟಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡವು ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಈ ವಿಷಯವನ್ನು ಪರಿಶೀಲಿಸಲು ವಿಧಿವಿಜ್ಞಾನ ತಂಡವನ್ನು ಸಹ ನಿಯೋಜಿಸಲಾಗಿದೆ. ಕೆಲ ಮಾಹಿತಿಯ ಪ್ರಕಾರ ಬಾಲಕಿ ರೆಡ್ಮಿ ಮೊಬೈಲ್ ಫೋನನ್ನು ಬಳಸುತ್ತಿದ್ದಳ ಎನ್ನಲಾಗಿದೆ.

ಇದನ್ನೂ ಓದಿ: ಸೋಲಿನ ಸುಳಿಯಲ್ಲಿರುವ SRH ತಂಡಕ್ಕೆ ಬಿಗ್‌ ಶಾಕ್:‌ IPLನಿಂದ ಹೊರಬಿದ್ದ ಖ್ಯಾತ ಆಲ್‌ ರೌಂಡರ್‌

Advertisement

ಆರೋಪಗಳನ್ನು ಕೇಳಿರುವ ಕ್ಸಿಯೋಮಿ ಒಡೆತನದ ರೆಡ್ಮಿ ಈ ಬಗ್ಗೆ “ಕ್ಸಿಯೋಮಿ ಇಂಡಿಯಾದಲ್ಲಿ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಕಷ್ಟದ ಸಮಯದಲ್ಲಿ ನಾವು ಬಾಲಕಿಯ ಕುಟುಂಬದೊಂದಿಗೆ ನಿಲ್ಲುತ್ತೇವೆ ಮತ್ತು ಯಾವುದೇ ರೀತಿಯ ಸಹಾಯಬೇಕಾದರೆ ನಾವು ಅದನ್ನು ಮಾಡಲು ಸಿದ್ದ. ಅವರು ಬಳಸುತ್ತಿದ್ದ ಮೊಬೈಲ್‌ ರೆಡ್ಮಿ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯ ನಿಜವಾದ ಕಾರಣವನ್ನು ತಿಳಿಯಲು ನಾವು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಅಗತ್ಯವಿರುವಲ್ಲಿ ಅವರರೊಂದಿಗೆ ಸಹಕಾರ ನೀಡುತ್ತೇವೆ” 91 ಮೊಬೈಲ್‌ ಗೆ ಸಂಸ್ಥೆ ಹೇಳಿದೆ.

ಮೊಬೈಲ್‌ ಸ್ಫೋಟ ಹಾಗೂ ಮೊಬೈಲ್‌ ಸಂಬಂಧಿರ ಅಪಘಾತಗಳು ನಡೆದಿರುವುದು ಇದೇ ಮೊದಲಲ್ಲ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಬದುವಾನ್‌ನಲ್ಲಿ ಬಾಲಕನೊಬ್ಬ ಮೊಬೈಲ್‌ ಚಾರ್ಜ್‌ ಮಾಡುವಾಗ ವಿದ್ಯುತ್‌ ಶಾಕ್‌ ತಗುಲಿ ಸಾವನ್ನಪ್ಪಿದ್ದ. ಫೋನ್ ಚಾರ್ಜ್ ಇಟ್ಟೇ ಮಾತನಾಡುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬ ಮೊಬೈಲ್‌ ಸ್ಫೋಟಗೊಂಡು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next