ಬೆಂಗಳೂರು : ಇಲ್ಲಿನ ಎಂಟು ವರ್ಷದ ಪೋರನೊಬ್ಬ ತನ್ನ ಬುದ್ದಿವಂತಿಗೆ ಹಾಗೂ ಚಾಣಾಕ್ಷತನದಿಂದ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾನೆ.
ಬೆಂಗಳೂರಿನ ಅಥರ್ವ ಆರ್ ಭಟ್ ಎಂಬ ಬಾಲಕ 1 ನಿಮಿಷ 29 ಸೆಕೆಂಡುಗಳಲ್ಲಿ ಮೂರು ಪಜ್ಜಲ್ ಕ್ಯೂಬ್ ಗಲನ್ನು ಕೂಡಿಸಿ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಗಿಟ್ಟಿಸಿಕೊಂಡಿದ್ದಾನೆ. ವಿಶೇಷ ಅಂದ್ರೆ ತನ್ನ ಎರಡು ಕೈಗಳಲ್ಲಿ ಒಂದೊಂದು ಮತ್ತು ಕಾಲುಗಳಿಂದ ಒಂದು ಪಜ್ಜಲ್ ಕೂಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.
2020ರ ಡಿಸೆಂಬರ್ 9 ರಂದು ನಡೆದ ಸ್ಪರ್ಧೆಯಲ್ಲಿ ಅಥರ್ವ ಸಾಧನೆಯನ್ನು ಮಾಡಿದ್ದು, ಗಿನ್ನಿಲ್ ವರ್ಲ್ಡ್ ರೆಕಾರ್ಡ್ ತನ್ನ ಸೊಷಿಯಲ್ ಮೀಡಿಯಾ ಖಾತೆಯಲ್ಲಿ ಇದೇ ಮಾರ್ಚ್ 15ರಂದು ಪೋಸ್ಟ್ ಮಾಡಿದೆ.
ಈ ಪೋಸ್ಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಭರಪೂರ ಕಮೆಂಟ್ ಮತ್ತು ಲೈಕ್ ಗಳು ಬರುತ್ತಿವೆ. ನಾಮಗೆ ಜಗತ್ತಿನ ಉತ್ತಮ ಬಹುಮುಖ ಪ್ರತಿಭೆ ಸಿಕ್ಕಿತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾಸ್ಯವಾಗಿ ಕಮೆಂಟ್ ಮಾಡಿದ್ದು, ನಾನು ಕಳೆದ 30 ವರ್ಷದಿಂದ ಪ್ರಯತ್ನಿಸಿದರೂ ಒಂದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.