ಡೆಹ್ರಾಡೂನ್: ಟಿಟಿ ವಾಹನವೊಂದು ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 16ಮಂದಿ ಮೃತಪಟ್ಟಿರುವ ಭೀಕರ ಘಟನೆ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಶನಿವಾರ(ಜೂ.15 ರಂದು) ನಡೆದಿರುವುದು ವರದಿಯಾಗಿದೆ.
ರಿಷಿಕೇಶ-ಬದ್ರಿನಾಥ್ ಹೆದ್ದಾರಿಯ ಅಲಕಾನಂದ ನದಿಯ ಬಳಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಟಿಟಿಯಲ್ಲಿ ಒಟ್ಟು 26 ಜನ ಪ್ರಯಾಣಿಸುತ್ತಿದ್ದರು. ಟಿಟಿ ವಾಹನ ಉರುಳಿ ಆಳವಾದ ಕಮರಿಗೆ ಬಿದ್ದಿದೆ. 16 ಮಂದಿ ಘಟನೆಯಲ್ಲಿ ಮೃತಪಟ್ಟಿದ್ದು 16 ಮಂದಿಗೆ ಗಾಯಗಳಾಗಿವೆ ಎಂದು ʼಪಿಟಿಐʼ ವರದಿ ತಿಳಿಸಿದೆ.
ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ಅಲಕನಂದಾ ನದಿಯ ದಡಕ್ಕೆ ಸುಮಾರು 250 ಮೀಟರ್ ಕೆಳಗೆ ಬಿದ್ದಿದೆ.
ಪ್ರಯಾಣಿಕರು ದೆಹಲಿ ಹಾಗೂ ಗಾಜಿಯಾಬಾದ್‌ನಿಂದ ಚೋಪ್ತಾ ತುಂಗನಾತ್‌ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಇಳಿದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.