ಮೆಕ್ಸಿಕೋ: ನೈಟ್ ಕ್ಲಬ್ ವೊಂದರಲ್ಲಿ ಫೈರಿಂಗ್ ಮಾಡಿದ ಪರಿಣಾಮ 8 ಮಂದಿ ಸಾವನ್ನಪ್ಪಿ, 5 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಮೆಕ್ಸಿಕೋದಲ್ಲಿರುವ ಜೆರೆಜ್ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಎಲ್ ವೆನಾಡಿಟೊ ಎನ್ನುವ ಬಾರ್ ಹಾಗೂ ನೈಟ್ ಕ್ಲಬ್ ನಲ್ಲಿ ಈ ಘಟನೆ ನಡೆದಿದ್ದು, ವಾಹನಗಳಲ್ಲಿ ಬಂದೂಕು ಹಿಡಿದು ಬಂದ ವ್ಯಕ್ತಿಗಳು ಬಾರ್ ಒಳಗೆ ನುಗ್ಗಿ ಗುಂಡು ಹಾರಿಸಿದ್ದಾರೆ. ಸಂತಸದಲ್ಲಿದ್ದ ಜನರೆಲ್ಲ ಗುಂಡಿನ ಸದ್ದು ಕೇಳುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿ ಅತ್ತಿತ್ತ ಓಡಿದ್ದಾರೆ. ಗುಂಡು ಹಾರಿಸಿದ ಪರಿಣಾಮ ಕ್ಲಬ್ ನಲ್ಲಿದ್ದ ಸಿಬ್ಬಂದಿಗಳು, ಡಿಜೆ ಹಾಗೂ ಗ್ರಾಹಕರು ಘಟನೆಗೆ ಬಲಿಯಾಗಿದ್ದಾರೆ.
6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆಯೂ ಜೆರೆಜ್ ನಲ್ಲಿ ಇಂಥದ್ದೇ ಗನ್ ಶೂಟ್ ಘಟನೆಗಳು ನಡೆದಿದೆ. ಇದರ ಹಿಂದೆ ಡ್ರಗ್ ವ್ಯಾಪಾರ ವಹಿವಾಟು ಅಡಗಿದೆ ಎಂದು ವರದಿಯೊಂದು ತಿಳಿಸಿದೆ.