Advertisement

ಕೋವಿಡ್ ಅವಧಿಯಲ್ಲಿ 8 ಲಕ್ಷ ಹೆಚ್ಚು ಎಲ್‌ಐಸಿ ಪಾಲಿಸಿ ಮಾರಾಟ: ಮಿನಿ ಐಪೆ

10:17 PM Apr 28, 2022 | Team Udayavani |

ಬೆಂಗಳೂರು:  ಕೊರೊನಾ ಹಾವಳಿಯಿಂದ 2021-22ರಲ್ಲಿ ಇಡೀ ದೇಶ ತತ್ತರಿಸಿತ್ತು. ಲಕ್ಷಾಂತರ ಜನ ಕೆಲಸ ಕಳೆದುಕೊಂಡು, ಪಟ್ಟಣದಿಂದ ಹಳ್ಳಿಗಳನ್ನು ಸೇರಿದ್ದರು. ಹಾಗಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲ್‌ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ನಿಗಮಕ್ಕೆ ಲಾಕ್‌ಡೌನ್‌ ನಡುವೆಯೂ ಕೋಟ್ಯಂತರ ರೂಪಾಯಿ ಹರಿದುಬಂದಿದೆ ಎಂದು ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕಿ ಮಿನಿ ಐಪೆ ತಿಳಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ರಲ್ಲಿ ದೇಶಾದ್ಯಂತ ಸುಮಾರು 2.17 ಕೋಟಿ ಪಾಲಿಸಿಗಳಾಗಿವೆ. 2020-21ರಲ್ಲಿ ಈ ಸಂಖ್ಯೆ 2.09 ಕೋಟಿ ಆಗಿತ್ತು. ಇದೇ ಅವಧಿಯಲ್ಲಿ ಹಲವು ವರ್ಷಗಳಿಂದ  ಸ್ಥಗಿತಗೊಂಡಿದ್ದ ಲಕ್ಷಾಂತರ ಪಾಲಿಸಿಗಳನ್ನೂ ಪುನರಾರಂ»ಮಾಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ನೇರ ಮಾರುಕಟ್ಟೆ’ ವಿಸ್ತರಣೆಗೆ ಯೋಜನೆ :

ಪ್ರಸ್ತುತ ಒಟ್ಟಾರೆ ಎಲ್‌ಐಸಿ ಬ್ಯುಸಿನೆಸ್‌ನಲ್ಲಿ ಶೇ. 95ರಷ್ಟು ಎಲ್‌ಐಸಿ ಏಜೆಂಟರಿಂದ ಹಾಗೂ ಉಳಿದ ಶೇ. 5ರಷ್ಟು ಬ್ಯಾಂಕ್‌ಗಳು ಮತ್ತು ಡಿಜಿಟಲ್‌ ವೇದಿಕೆಯಿಂದ ಬರುತ್ತದೆ. ಮುಂಬರುವ ದಿನಗಳಲ್ಲಿ “ನೇರ ಮಾರುಕಟ್ಟೆ’ ಜಾಲ ವಿಸ್ತರಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬ್ಯಾಂಕ್‌ ಹಾಗೂ ವೆಬ್‌ಸೈಟ್‌ ಮೂಲಕವೇ ಗ್ರಾಹಕರು ಎಲ್‌ಐಸಿ ಪಾಲಿಸಿಗಳನ್ನು ಖರೀದಿಸುವಂತೆ ಮಾಡಲಾಗುವುದು ಎಂದರು.

ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಪಟ್ನಾಯಕ್‌, ದೀಪಂ ನಿರ್ದೇಶಕ ರಾಹುಲ್‌ ಜೈನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಬಹುನಿರೀಕ್ಷಿತ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಷೇರು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮೇ 4ರಿಂದ 9ರವರೆಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಈ ಪ್ರಯೋಗದಿಂದ ಸುಮಾರು 21 ಸಾವಿರ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗಾಗಿ ತನ್ನ ಷೇರುಗಳ ಬೆಲೆಯನ್ನು 902ರಿಂದ 949 ರೂ. ನಿಗದಿ ಮಾಡಲಾಗಿದೆ. ಆರಂಭಿಕ ಹೂಡಿಕೆದಾರ (ರಿಟೇಲರ್‌)ರಿಗೆ 45ರಷ್ಟು ಹಾಗೂ ಪಾಲಿಸಿದಾರರಿಗೆ 60 ರೂ. ರಿಯಾಯಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಕನಿಷ್ಠ 15 ಈಕ್ವಿಟಿ ಷೇರುಗಳಿಗೆ ಹೂಡಿಕೆ ಮಾಡಬಹುದಾಗಿದ್ದು, ನಂತರದಲ್ಲಿ ಬಹುಮೊತ್ತಗಳಲ್ಲಿ ಬಿಡ್‌ ಮಾಡಲು ಅವಕಾಶ ಇರುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next