Advertisement

8 ಕೆ.ಜಿ. ಚಾಕ್ಲೇಟ್‌ ಹಂಚಿದ ಮೋದಿಯ ಬಡ ಅಭಿಮಾನಿ!

12:03 PM May 26, 2019 | sudhir |

ಕುಂದಾಪುರ: ದೇಶದಲ್ಲಿ ಮತ್ತೆ ಎನ್‌ಡಿಎಗೆ ಗೆಲುವು ಸಿಕ್ಕಿದ್ದಕ್ಕೆ, ಗುರುವಾರ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಬಡ ಅಭಿಮಾನಿ, ಗುಜರಿ ಮಾರುವ ವಕ್ವಾಡಿಯ ಮೊಹಮ್ಮದ್‌ ಅವರು ತನ್ನ ಊರಿನಲ್ಲಿ 8 ಕೆ.ಜಿ. ಚಾಕೊಲೇಟ್‌ ಹಂಚಿ ಸಂಭ್ರಮಿಸಿದರು.

Advertisement

5 ವರ್ಷದ ಹಿಂದೆ ಮೋದಿ ಗೆದ್ದು, ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಾಗಲೂ ಇವರು 5 ಕೆ.ಜಿ. ಸಿಹಿ ತಿಂಡಿ ನೀಡಿದ್ದರು. ಬಡತನ ಇದ್ದರೂ, ಅನಾರೋಗ್ಯದಿಂದ ಬಳಲುತ್ತಿದ್ದರೂ, ತನ್ನ ಮೆಚ್ಚಿನ ನಾಯಕ ಮತ್ತೂಮ್ಮೆ ಗೆದ್ದಿದ್ದಾರೆ ಎನ್ನುವ ಖುಷಿಯನ್ನು ಊರವರೊಂದಿಗೆ ಹಂಚಿಕೊಂಡರು. ಮೋದಿ ಅವರನ್ನು ನೇರವಾಗಿ ಕಾಣುವ ಅಭಿಲಾಷೆಯನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next