Advertisement

ಅಮೆರಿಕದಲ್ಲಿ ಶೂಟೌಟ್‌: ಭಾರತೀಯ ಮಹಿಳೆ ಸೇರಿ ಎಂಟು ಮಂದಿ ಸಾವು

11:03 PM Apr 16, 2021 | Team Udayavani |

ಇಂಡಿಯಾನಾಪೊಲೀಸ್‌/ನ್ಯೂಯಾರ್ಕ್‌: ಅಮೆರಿಕದ ಇಂಡಿಯಾನಾ ಪ್ರಾಂತ್ಯದ ಇಂಡಿಯಾನಾಪೊಲೀಸ್‌ ನಗರದಲ್ಲಿ ಗುರುವಾರ ತಡರಾತ್ರಿ ನಡೆದ ಶೂಟೌಟ್‌ನಲ್ಲಿ ಎಂಟು ಮಂದಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ ಭಾರತೀಯ ಮೂಲದ ಮಹಿಳೆ ಕೂಡ ಅಸುನೀಗಿದ್ದಾರೆ ಎಂದು ಅವರ ಬಂಧು ನ್ಯೂಯಾರ್ಕ್‌ನಲ್ಲಿ ತಿಳಿಸಿದ್ದಾರೆ.

Advertisement

“”ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್‌ ಇಲಾಖೆ ವಕ್ತಾರ ಘಟನೆ ಬಗ್ಗೆ ಮಾತನಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿಯೇ ಇರುವ ಫೆಡ್‌ಎಕ್ಸ್‌ ಕಂಪನಿಯ ಆವರಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಕನಿಷ್ಠ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ. “”ಯಾವ ಕಾರಣಕ್ಕಾಗಿ ಗುಂಡಿನ ಹಾರಾಟ ನಡೆದಿದೆ ಮತ್ತು ಕೃತ್ಯ ನಡೆಸಿದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಈ ಘಟನೆಯಲ್ಲಿ ಭಾರತೀಯ ಮೂಲದ ಮಹಿಳೆ ಅಸುನೀಗಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್‌ನಲ್ಲಿರುವ ಅವರ ಬಂಧು ಪರ್ಮಿಂದರ್‌ ಸಿಂಗ್‌ ಮಾತನಾಡಿ ನಮ್ಮ ಬಂಧು ಕಾರ್‌ನಲ್ಲಿ ಕುಳಿತಿದ್ದ ವೇಳೆ ಫೋನ್‌ ಮಾಡಿದ್ದಳು. ನಿದ್ರೆಯಲ್ಲಿದ್ದ ಕಾರಣ ಫೋನ್‌ ಬಂದದ್ದು ಗೊತ್ತಾಗಲಿಲ್ಲ. ಘಟನೆ ನಡೆದಾಗ ಆಕೆ ಅಲ್ಲಿಯೇ ಇದ್ದಳು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next