Advertisement

8 ಕೋಟಿ ರೂ. ಬೆಳೆ ಹಾನಿ ಪರಿಹಾರ ಬಿಡುಗಡೆ

01:24 PM Dec 06, 2021 | Team Udayavani |

ಚಿಕ್ಕಬಳ್ಳಾಪುರ: ಬೆಳೆ ಹಾನಿಗೊಳಗಾದ ಜಿಲ್ಲೆಯ ರೈತ ಫಲಾನುಭವಿಗಳಿಗೆ 8 ಕೋಟಿ ರೂ. ಹೆಚ್ಚು ಪರಿಹಾರ ಹಣ ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದರು.

Advertisement

ಬೆಳೆಹಾನಿ ಪರಿಹಾರ ಜಿಲ್ಲೆಯ ರೈತ ಫಲಾನುಭವಿಗಳಿಗೆ ಸಂದಾಯವಾಗಿರುವ ಬಗ್ಗೆಮಾಧ್ಯಮಗಳಿಗೆ ವಿವರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲಾದ್ಯಂತ ಹಾನಿಗೊಳಗಾದರೈತರ ಬೆಳೆಗಳ ವಿವರವನ್ನು 4 ಹಂತಗಳಲ್ಲಿ ಪರಿಹಾರ ಪೊರ್ಟಲ್‌ನಲ್ಲಿ ನಮೂದಿಸಲಾಗಿದ್ದು, ಡಿ.4ರವರೆಗೆಒಟ್ಟು 16,917 ರೈತರಿಗೆ 8.07 ಕೋಟಿ ರೂ. ಪರಿಹಾರ ಹಣ ಅವರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ನೇರ ವರ್ಗಾವಣೆಯಾಗಿದೆ. ಇನ್ನುಳಿದವರಿಗೂ ಸದ್ಯದಲ್ಲೇ ಸಂದಾಯವಾಗಲಿದೆ ಎಂದು ಹೇಳಿದರು.

ಕಳೆದ ಅಕ್ಟೋಬರ್‌ ತಿಂಗಳಿನಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿ ಬೆಳೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿವಿವರವನ್ನು ಸಂಗ್ರಹಿಸಿದ್ದರು. ಜಂಟಿ ಸಮೀಕ್ಷೆಯಿಂದಸ್ವೀಕೃತವಾದ ಬೆಳೆ ಹಾನಿಯಾದ ರೈತರ ವಿವರ ಹಾಗೂ ದತ್ತಾಂಶವನ್ನು ಪರಿಹಾರ ಪೊರ್ಟಲ್‌ನಲ್ಲಿ ನಮೂದಿಸುವ ಹಾಗೂ ಪರಿಹಾರ ಸಂದಾಯಿಸುವ ಎರಡೂ ಪ್ರಕ್ರಿಯೆಗಳು ಜೊತೆಯಲ್ಲಿಯೇ ಶರವೇಗದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

7ಕ್ಕೆ ಪೂರ್ಣಗೊಳ್ಳುತ್ತದೆ: ಈ ಕಾರ್ಯದಲ್ಲಿ ಸರ್ಕಾರಿ ರಜಾ ದಿನಗಳನ್ನೂ ಲೆಕ್ಕಿಸದೆ ಸಮರೋಪಾದಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಪರಿಹಾರ ಪೊರ್ಟಲ್‌ನಲ್ಲಿ ಈ ಮಾಹಿತಿ ಹಾಗೂ ದತ್ತಾಂಶ ನಮೂದು ಪ್ರಕ್ರಿಯೆಯು ಡಿ.7ಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಹೆಚ್ಚಿನ ಆತಂಕಕ್ಕೆ ಒಳಗಾಗಬೇಕಿಲ್ಲ: ಪರಿಹಾರ ಪೊರ್ಟಲ್‌ನಲ್ಲಿ ಈಗಾಗಲೇ ನಮೂದಾಗಿರುವ ಬೆಳೆ ಹಾನಿಗೊಳಗಾದ ರೈತರ ಪೈಕಿ ಡಿ.4ರವರೆಗೆ ಒಟ್ಟು 16,917 ರೈತ ಫಲಾನುಭವಿಗಳಿಗೆ 8.07 ಕೋಟಿ ರೂ.ಪರಿಹಾರ ಹಣವನ್ನು ಅವರ ಖಾತೆಗೆ ಪ್ರತ್ಯೇಕವಾಗಿನೇರ ವರ್ಗಾವಣೆಯಾಗಿದೆ ಜೊತೆಗೆ ಪ್ರತಿದಿನದತ್ತಾಂಶವನ್ನು ನಮೂದಿಸುವ ಹಾಗೂ ಪರಿಹಾರಸಂದಾಯಿಸುವ ಎರಡೂ ಪ್ರಕ್ರಿಯೆಗಳು ನಿರಂತರಚಾಲನೆಯಲ್ಲಿವೆ. ಪರಿಹಾರ ಸಂದಾಯವಾಗಿಲ್ಲದರೈತರು ಹೆಚ್ಚಿನ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಹೇಳಿದರು.

Advertisement

ಬೆಳೆ ಹಾನಿಗೊಳಗಾದ ಜಿಲ್ಲೆಯ ಎಲ್ಲಾ ರೈತರಿಗೆ ಈತಿಂಗಳ ಅಂತ್ಯದೊಳಗೆಪರಿಹಾರ ಹಣವು ತಮ್ಮಬ್ಯಾಂಕ್‌ ಖಾತೆಗಳಿಗೆ ಡಿಬಿಟಿ ಮೂಲಕತ್ವರಿತವಾಗಿ ನೇರ ವರ್ಗಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next