ಹಟ್ಟಿಚಿನ್ನದಗಣಿ : ಪಟ್ಟಣದ ಆರಾಧ್ಯ ದೈವ ಲಿಂಗಾವಧೂತ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಲಿಂಗಾವಧೂತರ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ನಡೆದವು. ಸಂತೆಕಲ್ಲೂರಿನ ಮಹಾಂತ ಮಠದ ಮಹಾಂತ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದೇವಸ್ಥಾನ ಸಮಿತಿ ಅಧ್ಯಕ್ಷ ಗುಂಡಪ್ಪಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಗಣಿ ಕಂಪನಿ ಆಡಳಿತ ವರ್ಗ, ಕಾರ್ಮಿಕರು, ರಾಜಕಾರಣಿಗಳು ಹಾಗೂ ವ್ಯಾಪಾರಸ್ಥರ ಸಹಕಾರದಿಂದ ಲಿಂಗಾವಧೂತ ದೇವಸ್ಥಾನ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು.
ಪಪಂ ಅಧ್ಯಕ್ಷೆ ವಿಜ್ಜಮ್ಮ ಜೇರಬಂಡಿ, ಉಪಾಧ್ಯಕ್ಷೆ ನಾಗರತ್ನ ಗುರಿಕಾರ್, ಅಂಗನವಾಡಿ ಮೇಲ್ವಿಚಾರಕಿ ಶಾಂತ ರೊಳ್ಳಿ, ವ್ಯಾಪಾರಸ್ಥ ನಾಗರೆಡ್ಡಪ್ಪ ಸಾಹುಕಾರ ಮಾತನಾಡಿದರು. ಈ ವೇಳೆ ಮುಖಂಡರಾದ ಎನ್. ಸ್ವಾಮಿ ನಾಯಿಕೊಡಿ, ಬಾಲಪ್ಪ ನಾಯಕ, ಬಸಪ್ಪ ಕುರುಬರ, ರಂಗನಾಥ ಮುಂಡರಗಿ, ಗುಡದನಾಳದ ಅಮರಯ್ಯ ತಾತಾ, ಶಿವರಾಜಗೌಡ, ಗುಂಡಪ್ಪಗೌಡ, ಶರಣಪ್ಪ ಅಂಗಡಿ ಸೇರಿದಂತೆ ಇತರರು ಇದ್ದರು.