Advertisement
ಇದು ಯಾವುದೇ ಒಂದು ಇಮೇಲ್ ಸೇವೆ ಪೂರೈಕೆದಾರರ ಮೂಲದಿಂದ ಸೋರಿಕೆಯಾದ ದ್ದಲ್ಲ. ಬದಲಿಗೆ ಹಲವು ಮೂಲಗಳಿಂದ ಅಂದರೆ, ಫೇಸ್‌ಬುಕ್, ಟ್ವಿಟರ್, ಜಿಮೇಲ್ ಸೇರಿೆ ವಿವಿಧ ವೆಬ್‌ಸೈಟ್‌ಗಳಲ್ಲಿ ಜನ ಹೊಂದಿ ರುವ ಖಾತೆ ಹ್ಯಾಕ್ ಆಗಿ, ಪಾಸ್‌ವರ್ಡ್‌ಗಳು ಬಹಿರಂಗಗೊಂಡಿವೆ. ಇದನ್ನು ಮೊದಲು ಐ ಬೀನ್ ಪಾವ್°ಡ್ ಎಂಬ ಸೈಟ್‌ನಲ್ಲಿ ಟೋರಿ ಹಂಟ್ ಎಂಬವರು ಕಂಡು ಹಿಡಿದಿದ್ದಾರೆ. ಈ ಕಲೆಕ್ಷನ್ 1 ದತ್ತಾಂಶವು 87ಗಿಗಾಬೈಟ್ ಇದ್ದು, 12 ಸಾವಿರ ಫೈಲ್‌ಗಳಲ್ಲಿ ಸಂಗ್ರಹವಾಗಿದೆ.
ಹ್ಯಾವ್ ಐ ಬೀನ್ ಪಾವ್°ಡ್ (https://haveibeenpwned.com) ವೆಬ್‌ಸೈಟ್‌ನಲ್ಲಿ ಯಾವ ಇಮೇಲ್ ಐಡಿ ಗಳು ಹ್ಯಾಕ್ ಆಗಿವೆ ಎಂಬುದನ್ನು ಜನರು ತಿಳಿದುಕೊಳ್ಳಬಹುದು. ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ಇಮೇಲ್ ಐಡಿ ಟೈಪ್ ಮಾಡಿದರೆ, ಇದು ಹ್ಯಾಕ್ ಆಗಿದೆಯೇ ಎಂಬುದನ್ನು ಇದು ತಿಳಿಸುತ್ತದೆ. ಅಷ್ಟೇ ಅಲ್ಲ, ಈ ಹಿಂದೆ ಎಷ್ಟು ಬಾರಿ ಹ್ಯಾಕ್ ಆಗಿತ್ತು ಎಂಬುದನ್ನೂ ಇದು ಸೂಚಿಸುತ್ತದೆ. ಇದರೊಂದಿಗೆ ನಿಮ್ಮ ಇಮೇಲ್ ವಿಳಾಸ, ಪಾಸ್‌ವರ್ಡ್, ಬಳಕೆ ದಾರರ ಹೆಸರು, ಐಪಿ ವಿಳಾಸ ಸೇರಿದಂತೆ ಯಾವ ಮಾಹಿತಿ ಹ್ಯಾಕ್ ಆಗಿದೆ ಎಂಬುದನ್ನೂ ಇದು ಸೂಚಿಸುತ್ತದೆ. ಒಂದು ವೇಳೆ ಹ್ಯಾಕ್ ಆಗಿದ್ದರೆ, ತಕ್ಷಣವೇ ಆ ಖಾತೆಗಳ ಪಾಸ್‌ವರ್ಡ್ ಅನ್ನು ಬದಲಿಸಿ ಕೊಳ್ಳಬೇಕು.