Advertisement

ಕುಂದಾಪುರ: ರಂಗೋಲಿಯಲ್ಲಿ 76 ನಿಮಿಷಗಳಲ್ಲಿ 76 ರಾಷ್ಟ್ರಧ್ವಜ

12:30 PM Sep 22, 2022 | Team Udayavani |

ಕುಂದಾಪುರ: ತಮಿಳುನಾಡಿನ ಜಾಕಿಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆಯವರು ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ 76 ನಿಮಿಷಗಳಲ್ಲಿ ಭಾರತದ 76 ರಾಷ್ಟ್ರ ಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ರಂಗೋಲಿ ಕಲಾವಿದೆ ಡಾ| ಭಾರತಿ ಮರವಂತೆ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

Advertisement

ಏಕ ವ್ಯಕ್ತಿಯಾಗಿ, ಅನನ್ಯ ಕೌಶಲದಿಂದ ಬೃಹತ್‌ ಗಾತ್ರದಲ್ಲಿ ಧ್ವಜದ ಪ್ರಮಾಣತೆಗೆ ಅನುಗುಣವಾಗಿ ರಂಗೋಲಿಯಲ್ಲಿ 76 ರಾಷ್ಟ್ರಧ್ವಜಗಳನ್ನು 76 ನಿಮಿಷಗಳ ಮೊದಲೇ ಬಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಕಲಾ ಪ್ರದರ್ಶನದಲ್ಲಿ ಜಾಗತಿಕ ಮಟ್ಟದ ವಿವಿಧ ರಾಷ್ಟ್ರಗಳ ಕಲಾವಿದರು ವಿವಿಧ ಕೌಶಲಗಳನ್ನು ಪ್ರದರ್ಶಿಸಿದರು.

ಡಾ| ಭಾರತಿ ಮರವಂತೆಯವರು “ಕರಾವಳಿ ಕರ್ನಾಟಕದ ರಂಗೋಲಿ ಕಲೆ’ ಎನ್ನುವ ಸಂಶೋಧನ ವಿಷಯಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. 5 ಸಾವಿರಕ್ಕೂ ಮಿಕ್ಕಿ ಮಂದಿ ಮಹಿಳೆಯರು, ಮಕ್ಕಳಿಗೆ ರಂಗೋಲಿ ತರಬೇತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next