Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

11:15 PM Aug 15, 2022 | Team Udayavani |

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಜನತೆ ಸಂಭ್ರಮದಿಂದ ಪಾಲ್ಗೊಂಡರು. “ಹರ್‌ ಘರ್‌ ತಿರಂಗಾ’ ಅಭಿಯಾನದ ಹಿನ್ನೆಲೆಯಲ್ಲಿ ಎಲ್ಲೆಡೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ ಮೆರೆದರು. ವಿವಿಧ ಪೊಲೀಸ್‌ ತುಕಡಿಗಳು ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿಜಯನಗರದಲ್ಲಿ ಜಗತ್ತಿನ 9ನೇ ಹಾಗೂ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭದಲ್ಲಿ 120/80 ಅಳತೆಯ ರಾಷ್ಟ್ರಧ್ವಜ ಹಾರಿಸಲಾಯಿತು.

Advertisement

ದೇಶದ ಅತೀ ಎತ್ತರದ ಧ್ವಜಸ್ತಂಭ
ಹೊಸಪೇಟೆ: ಜಗತ್ತಿನ 9ನೇ ಹಾಗೂ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಿಸುವುದು ಮಾತ್ರವಲ್ಲದೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರಲ್ಲಿ ಧ್ವಜಾರೋಹಣ ಮಾಡಿ ವಿಜಯನಗರ ಜಿಲ್ಲೆ ಸೋಮವಾರ ಹೊಸ ದಾಖಲೆ ಬರೆಯಿತು.

ಪ್ರವಾಸೋದ್ಯಮ ಇಲಾಖೆಯ 6 ಕೋಟಿ ರೂ. ಅನುದಾನದಲ್ಲಿ ನಗರದ ಡಾ| ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣ(ಮುನ್ಸಿಪಲ್‌ ಮೈದಾನ)ದಲ್ಲಿ ನಿರ್ಮಿಸಿದ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಸೋಮವಾರ 120/80 ಅಳತೆಯ ರಾಷ್ಟ್ರಧ್ವಜ ಹಾರಿಸಲಾಯಿತು.

ತಾಂತ್ರಿಕ ದೋಷ ಕಾಣಿಸಿಕೊಂಡಿ ದ್ದರಿಂದ ಧ್ವಜ ಪೂರ್ಣ ಮೇಲೇರ ಲಿಲ್ಲ. ಬಜಾಜ್‌ ಕಂಪೆನಿಯ ತಂತ್ರಜ್ಞರು ಹಾಗೂ ಚಿತ್ರದುರ್ಗದ ಜ್ಯೋತಿರಾಜ್‌ (ಕೋತಿರಾಜ್‌) ಅವರ ಸಹಾಯದೊಂದಿಗೆ ಧ್ವಜಸ್ತಂಭದ ಒಳಗೆ ಗಂಟಿಕ್ಕಿಕೊಂಡಿದ್ದ ತಂತಿಯನ್ನು ಸರಿಪಡಿಸಿ ಧ್ವಜ ಹಾರಾಡುವಂತೆ ಮಾಡಲಾಯಿತು. ಇಡೀ ಪ್ರಕ್ರಿಯೆ ಮುಗಿಯಲು ಸುಮಾರು 35ರಿಂದ 37 ನಿಮಿಷ ಬೇಕಾಯಿತು. ಬೆಳಗ್ಗೆ 9ಕ್ಕೆ ಜಿಲ್ಲಾಡಳಿತದಿಂದ ಹಮ್ಮಿಕೊಂ ಡಿದ್ದ ಸಮಾರಂಭದಲ್ಲಿ ಪ್ರವಾ ಸೋದ್ಯಮ ಸಚಿವ ಆನಂದ್‌ ಸಿಂಗ್‌ ದೀಪ ಬೆಳಗಿ ಸಾಂಕೇತಿಕ ವಾಗಿ ಉದ್ಘಾಟಿಸಿದರು.

ವಿಜಯನಗರದ ಕೀರ್ತಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿ ಯಲ್ಲಿ 361 ಅಡಿ ಎತ್ತರದ ಧ್ವಜಸ್ತಂಭ ದೇಶದಲ್ಲೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆ ಹೊಂದಿತ್ತು. ಈಗ ಆ ಕೀರ್ತಿ ವಿಜಯನಗರದ ಪಾಲಾಗಿದೆ. 405 ಅಡಿ ಎತ್ತರದ ಧ್ವಜಸ್ತಂಭ ಇದುವರೆಗೆ ದೇಶದಲ್ಲಿ ಎಲ್ಲೂ ಅಳವಡಿಸಿಲ್ಲ. ಜಗತ್ತಿ ನಲ್ಲೇ ಅತಿ ಎತ್ತರದ ಧ್ವಜಸ್ತಂಭಗಳಲ್ಲಿ ಇದು 9ನೆಯದು ಎಂದು ವಿವರಿಸಿದರು.

Advertisement

ಪಿತೃ ವಿಯೋಗದ ನಡುವೆಯೂ
ಭಾಗಿಯಾದ ಸಚಿವ ಬೈರತಿ
ದಾವಣಗೆರೆ: ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಅವರು ತಂದೆಯ ನಿಧನದ ನೋವಿನಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ದೇಶಭಕ್ತಿ ಮೆರೆದರು. ಸಚಿವರ ತಂದೆ ರವಿವಾರ ನಿಧನ ಹೊಂದಿದ್ದು, ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ರವಿವಾರ ರಾತ್ರಿಯೇ ಬೆಂಗಳೂರಿನಿಂದ ದಾವಣಗೆರೆಗೆ ಆಗಮಿಸಿದ ಸಚಿವರು, ಬೆಳಗ್ಗೆ ಸಾರ್ವಜನಿಕ ಧ್ವಜಾರೋಹಣದಲ್ಲಿ ಭಾಗಿಯಾದರು.

ಚಾಮರಾಜಪೇಟೆ ಮೈದಾನ: ಸ್ವಾತಂತ್ರ್ಯೋತ್ಸವ
ಬೆಂಗಳೂರು: ಮಾಲಕತ್ವ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಆಟದ ಮೈದಾನದಲ್ಲಿ ಸೋಮವಾರ ಖಾಕಿ ಸರ್ಪಗಾವಲಿನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸ ಲಾಯಿತು.
ಎರಡು ಸಮುದಾಯಗಳ ನಡುವಿನ ತಿಕ್ಕಾಟಕ್ಕೆ ಕಾರಣ ವಾಗಿದ್ದ ಈ ಮೈದಾನದಲ್ಲಿ ಕಂದಾಯ ಇಲಾಖೆ ವತಿಯಿಂದ ಸ್ವಾತಂತ್ರ್ಯ ದಿನದ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ 8 ಗಂಟೆಗೆ ಉಪವಿಭಾಗಾಧಿಕಾರಿ ಶಿವಣ್ಣ ಧ್ವಜಾರೋಹಣ ನೆರವೇರಿಸಿದರು. ಸಂಸದ ಪಿ.ಸಿ.ಮೋಹನ್‌, ಶಾಸಕ ಜಮೀರ್‌ ಅಹಮದ್‌ಖಾನ್‌, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಉಪಸ್ಥಿತರಿದ್ದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಬಿಗಿ ಬಂದೋಬಸ್ತ್
ಇಲ್ಲಿ ಧ್ವಜಾರೋಹಣ ನೆರವೇರಿಸಲು ಸರಕಾರ ನಿರ್ಧರಿಸಿದ ಬೆನ್ನಿಗೇ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರವಿವಾರ ಮತ್ತು ಸೋಮವಾರ ಮೈದಾನದ ಬಳಿ ಓಡಾಟ ನಿರ್ಬಂಧಿಸಲಾಗಿತ್ತು. ಮೈದಾನದ ಸುತ್ತ ಬ್ಯಾರಿಕೇಡ್‌ ಅಳವಡಿಸಿ ಮೈದಾನದೊಳಗೆ ಸಾರ್ವಜನಿಕರು ಬರದಂತೆ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ, ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿತ್ತು.

ಒಕ್ಕೂಟದ ಸದಸ್ಯರು ಪೊಲೀಸ್‌ ವಶಕ್ಕೆ
ಧ್ವಜಾರೋಹಣ ಸಂದರ್ಭದಲ್ಲಿ ವಿಐಪಿ ದ್ವಾರದಲ್ಲಿ ತಮ್ಮನ್ನು ಬಿಡುವಂತೆ ಚಾಮರಾಜಪೇಟೆ ನಾಗರಿಕ ಒಕ್ಕೂಟದ ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next