Advertisement

ವಿಚ್ಛೇದನ ಕಾರಣಕ್ಕೆ ಸೊಸೆಯನ್ನೇ ಗುಂಡಿಕ್ಕಿ ಕೊಂದ ಭಾರತೀಯ ಮೂಲದ ವ್ಯಕ್ತಿ ಅರೆಸ್ಟ್

07:33 PM Oct 07, 2022 | Team Udayavani |

ಸ್ಯಾನ್‌ಫ್ರಾನ್ಸಿಸ್ಕೊ: ಮಗನಿಗೆ ವಿಚ್ಛೇದನ ನೀಡಲು ಹೊರಟ ಕೋಪದಲ್ಲಿ ಭಾರತೀಯ ಮೂಲದ ವ್ಯಕ್ತಿ, ಅಮೆರಿಕದಲ್ಲಿ ತಮ್ಮ ಸೊಸೆಯನ್ನು ಗುಂಡು ಹಾರಿಸಿ ಕೊಂದಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಪೊಲೀಸರು ಸೀತಾಲ್‌ ಸಿಂಗ್‌ ದೊಸಾಂಜ್‌ರನ್ನು ಬಂಧಿಸಿದ್ದಾರೆ.

ಕ್ಯಾಲಿಫೋರ್ನಿಯಾ ರಾಜ್ಯದ, ದಕ್ಷಿಣ ಸ್ಯಾನ್‌ ಹೋಸೆಯಲ್ಲಿರುವ ವಾಲ್‌ಮಾರ್ಟ್‌ ಪಾರ್ಕಿಂಗ್‌ ಲಾಟ್‌ನಲ್ಲಿ ಕಳೆದವಾರ ಈ ಭೀಕರ ಘಟನೆ ನಡೆದಿದೆ.

ಸಾಯುವ ಮುನ್ನ ಸೊಸೆ ಗುರ್ಪ್ರೀತ್‌ ಕೌರ್‌ ತನ್ನ ಸಮೀಪದ ಸಂಬಂಧಿಯೊಬ್ಬರಿಗೆ ಕರೆ ಮಾಡಿ, ಸೀತಾಲ್‌ ಸಿಂಗ್‌ ತನ್ನನ್ನು ಹುಡುಕುತ್ತಿದ್ದಾರೆ. ಈಗ ಹತ್ತಿರವೇ ಬರುತ್ತಿದ್ದಾರೆ ಎಂದು ಹೇಳಿದ್ದರು. ಅದಾದ ಮೇಲೆ ಕರೆ ಕಡಿತಗೊಂಡಿತ್ತು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next