Advertisement

ಕೋವಿಡ್ ಸಮಯದಲ್ಲಿ ಭಾರತದ ಸಾಧನೆ ಶ್ಲಾಘನೀಯ: ಮಮತಾದೇವಿ ಜಿ.ಎಸ್.  

12:27 PM Jan 26, 2022 | Team Udayavani |

ಭಟ್ಕಳ: ಕೋವಿಡ್ 19ರ ಸಮಯದಲ್ಲಿ ನಮ್ಮ ದೇಶವು ಸಾಧನೆಯ ಮೈಲಿಗಲ್ಲನ್ನು ಏರುತ್ತಿದ್ದು ಫಾರ್ಮಸಿ ಆಫ್ ದಿ ವರ್ಲ್ಡ್ ಎನ್ನುವ  ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಹೇಳಿದರು.

Advertisement

ಅವರು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ನಮ್ಮ ಸ್ವಾತಂತ್ರ್ಯಕ್ಕಾಗಿ ಸುಧೀರ್ಘ ಹೋರಾಟ ಮಾಡಿದವರನ್ನು ನಾವು ನೆನಪಿಸಿಕೊಳ್ಳುವುದರೊಂದಿಗೆ ಸಂವಿಧಾನ ಜಾರಿಗೆ ಬಂದ ಈ ದಿನವನ್ನು ನೆನಪಿಸಿಕೊಳ್ಳಬೇಕಾಗಿದೆ. ನಮ್ಮ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಸಾರುತ್ತಾ ಬಂದಿದೆ. ನಮ್ಮ ಭಾರತ ದೇಶವು ವೈಭವದ ಇತಿಹಾಸವನ್ನು ಹೊಂದಿದೆ. ನಮ್ಮ ದೇಶವು ಎಲ್ಲಾ ವಿಭಾದಲ್ಲಿಯೂ ಕೂಡಾ ಉತ್ತಮ ಸಾಧನೆಯನ್ನು ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯೆನಿಸಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸುನಿಲ್ ನಾಯ್ಕ ಅವರು ಮಾತನಾಡಿ ನಮಗೆ ಗಣರಾಜ್ಯೋತ್ಸವ ಎಂದರೆ ಒಂದು ವಿಶೇಷ ಕಾರ್ಯಕ್ರಮವಾಗಿದೆ.  ಇದನ್ನು ನಾವು ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಅತ್ಯಂತ ವಿಜೃಂಬಣೆಯಿಂದ ಮಾಡುತ್ತಿದ್ದೇವೆ. ನಮ್ಮ ಈ ಒಂದು ದಿನದ ಇತಿಹಾಸನ್ನು ನೋಡಿದರೆ ಅನೇಕರು ಬಲಿದಾನಗೈದಿದ್ದಾರೆ, ಅವರನ್ನು ನಾವು ಸ್ಮರಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದರಲ್ಲದೇ, ಸರಕಾರದ ಕಾರ್ಯ ಸುಗಮವಾಗಿ ಆಗಬೇಕಾದರೆ ಅಧಿಕಾರಿಗಳ ಕರ್ತವ್ಯ ಮುಖ್ಯವಾಗಿದೆ.  ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಜನತೆಗೆ ಉತ್ತಮವಾಗಿ ಕೆಲಸ ಮಾಡಿ ಕೊಡುವಂತೆ ಕಚೇರಿಗೆ ಬಂದವರನ್ನು ಸೌಜನ್ಯದಿಂದ ಮಾತನಾಡಿಸುವಂತೆಯೂ ಕರೆ ನೀಡಿದರು.

ವೇದಿಕೆಯಲ್ಲಿ ತಾಲೂಖಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಮುಖ್ಯಾಧಿಕಾರಿ ರಾಧಿಕಾ ಎಸ್.ಎನ್., ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಉಪಸ್ಥಿತರಿದ್ದರು.

Advertisement

ತಹಸೀಲ್ದಾರ್ ಎಸ್. ರವಿಚಂದ್ರ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ಹಾಗೂ ಸುರೇಶ ಮುರ್ಡೇಶ್ವರ ನಿರ್ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next