ಕುಷ್ಟಗಿ: ಸಮಾಜ ಋಣ ಬಳಸಿಕೊಂಡು ಉನ್ನತ ಹುದ್ದೆಯಲ್ಲಿದ್ದವರು, ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು
ಕುಷ್ಟಗಿಯ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ ಸಹಯೋಗದಲ್ಲಿ 73ನೇ ಗಣರಾಜ್ಯೋತ್ಸವ ಸಮಾರಂಭದ ರಾಷ್ಟ್ರ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಅಡಿಯಲ್ಲಿ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಮುಖಗಳಿದ್ದಂತೆ. ಹಕ್ಕು, ಕರ್ತವ್ಯ ಬಳಸಿಕೊಂಡು ದೇಶ ಸೇವೆಗೆ ಮುಂದಾಗಬೇಕು ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದಲು ಕರೆ ನೀಡಿದ ಶಾಸಕರು, ಕಲ್ಯಾಣ ಕರ್ನಾಟಕ ದಲ್ಲಿ ಸೈನ್ಯ ಸೇರಲು ಇಚ್ಚಿಸುವವರಿಗೆ ಸೇನಾ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು ಇದೇ ಕ್ರೀಡಾಂಗಣದಲ್ಲಿ ರಜಿಸ್ಟೇಷನ್ ಫೋರಂ ಆರಂಭಿಸಲಾಗುತ್ತಿದೆ.21 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಹೆಸರು ನೊಂದಾಯಿಸಿಕೊಳ್ಳಬೇಕು ಪೂರಕ ಮಾರ್ಗದರ್ಶನ ನೀಡಲು ಇಲ್ಲಿನ ಮಾಜಿ ಸೈನಿಕರು ಮುಂದೆ ಬಂದಿರುವುದಾಗಿ ತಿಳಿಸಿದರು
ತಹಶೀಲ್ದಾರ ಎಂ.ಸಿದ್ದೇಶ ಅವರು, ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಸಂವಿಧಾನ ಭಾರತೀಯರಿಗೆ ದಾರಿದೀಪವಾಗಿದೆ. ಗ್ರಾಮ -1. ತಾಲೂಕಿನ 45 ಗ್ರಾಮಗಳಿಗೆ ಅನುಷ್ಠಾನ ಗೊಳ್ಳಲಿದ್ದು, 750 ಕ್ಕೂ ಯೋಜನೆಗಳು ಇದರ ವ್ಯಾಪ್ತಿಗೆ ಬರಲಿವೆ ಎಂದರು.
ತಾ.ಪಂ.ಇಓ ಡಾ.ಜಯರಾಮ್ ಚೌವ್ಹಾಣ್, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಬಿಇಓ ಚನ್ನಬಸಪ್ಪ ಮಗ್ಗದ್, ಮುಖ್ಯಾಧಿಕಾರಿ ಉಮೇಶ ಹಿರೇಮಠ, ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ಗ್ರೇಡ್-2 ತಹಶೀಲ್ದಾರ ಮುರಳಿಧರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ, ಸಮಾಜ ಕಲ್ಯಾಣ ಅಧಿಕಾರಿ ಬಾಲಚಂದ್ರ ಸಂಗನಾಳ, ಅಕ್ಷರ ದಾಸೋಹ ಯೋಜನಾಧಿಕಾರಿ ಕೆ.ಶರಣಪ್ಪ, ಕ್ರೈಂ ವಿಭಾಗದ ಪಿಎಸೈ ಮಾನಪ್ಪ ವಾಲ್ಮೀಕಿ, ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಸಿಡಿಪಿಒ ಅಮರೇಶ ಹಾವಿನಾಳ, ಎಇಇ ಧರಣೇಂದ್ರ ಮತ್ತೀತರಿದ್ದರು.