Advertisement

ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿ: ಶಾಸಕ ಸಿದ್ದು ಸವದಿ

04:48 PM Jan 26, 2022 | Team Udayavani |

ರಬಕವಿ-ಬನಹಟ್ಟಿ: ಪ್ರತಿಯೊಬ್ಬರು ತಮ್ಮ ಸ್ವಾರ್ಥ ಜೀವನ ಬಿಟ್ಟು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ದೇಶದ ಜನರು ರಾಷ್ಟ್ರೀಯ ಹಬ್ಬಗಳನ್ನು ಗೌರವದಿಂದ ಮತ್ತು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಬುಧವಾರ ರಬಕವಿಯ ಎಂ.ವಿ.ಪಟ್ಟಣ ಶಾಲಾ ಮೈದಾನದ ಆವರಣದಲ್ಲಿ ನಡೆದ ರಬಕವಿ-ಬನಹಟ್ಟಿ ತಾಲೂಕು ಆಡಳಿತ ವತಿಯಂದ ಹಮ್ಮಿಕೊಂಡ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಯುವಕರಲ್ಲಿ ಸಂವಿಧಾನದ ಅರಿವು ಮತ್ತು ಮಹತ್ವವನ್ನು ತಿಳಿಸುವುದು ಅಗತ್ಯವಾಗಿದೆ. ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ. ಪ್ರತಿ ಬಾರಿಯೂ ವಿದೇಶದ ಮೇಲೆ ಅವಲಂಬಿತವಾಗಿದ್ದ ಭಾರತ ಇಂದು ಸಂಶೋಧನೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಇಲ್ಲಿಯ ವಿಜ್ಞಾನಿಗಳು, ಸಂಶೋಧರು ದೇಶಿಯ ಕೋವಿಡ್ ಲಸಿಕೆಯನ್ನು ಕಂಡು ಹಿಡಿಯುವುದರ ಜೊತೆಗೆ ನೂರು ಕೋಟಿಗಿಂತ ಹೆಚ್ಚಿನ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ತಹಶೀಲ್ದಾರ್ ಸಂಜಯ ಇಂಗಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಣರಾಜ್ಯೋತ್ಸವ ಪ್ರಜಾಪ್ರಭುತ್ವದ ಹಬ್ಬವಾಗಿದೆ. ಇದು ಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸುವ ದಿನವಾಗಿದೆ. ಭಾರತದ ಸಂವಿಧಾನ ಸಜೀವ ಸಂವಿಧಾನಕ್ಕೆ ಒಂದು ನಿದರ್ಶನವಾಗಿದೆ. ಕೋವಿಡ್ ಸಂದರ್ಭದಲ್ಲಿ ಅನೇಕ ಜನರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ನಾವೆಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾರುತಿ ರಾಠೋಢ, ವೆಂಕಣ್ಣ ಪತ್ತಾರ, ಆಶಾ ಪಾಟೀಲ, ಪ್ರೊ.ಕೆ.ಎಚ್.ಸಿನ್ನೂರ, ಅಬುಬಕರ್ ಬಂಡೇಬುರಜ್, ಶಂಕರ ಜುಂಜಪ್ಪನವರ, ಮಲ್ಲಿಕಾರ್ಜುನ ಜನವಾಡ ಸೇರಿದಂತೆ 18 ಜನರನ್ನು ಸನ್ಮಾನಿಸಲಾಯಿತು. ಪೊಲೀಸ್, ಗೃಹ ರಕ್ಷಕ ದಳದವರು ಆಕರ್ಷಕ ಪಥ ಸಂಚಲನ ನಡೆಸಿದರು.

ಸಮಾರಂಭದ ವೇದಿಕೆಯ ಮೇಲೆ ರಬಕವಿ ಬನಹಟ್ಟಿ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪರಪ್ಪ ಹಟ್ಟಿ, ಸಿಪಿಐ ಜಿ.ಕರುಣೇಶಗೌಡ, ರಬಕವಿ-ಬನಹಟ್ಟಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ರಬಕವಿ ಬನಹಟ್ಟಿ ಪೌರಾಯುಕ್ತ ಶ್ರೀನಿವಾಸ ಜಾಧವ, ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ನಗರಸಭಾ ಸದಸ್ಯ ಸಂಜಯ ತೆಗ್ಗಿ, ವಿಜಯ ಕಲಾಲ, ಇನೂಸ್ ಚೌಗಲಾ, ಯಲ್ಲಪ್ಪ ಕಟಗಿ ಇದ್ದರು.

Advertisement

ಸಮಾರಂಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ನೀಲಕಂಠ ದಾತಾರ, ಶಿವಾನಂದ ಬಾಗಲಕೋಟಮಠ, ಬಸವರಾಜ ತೆಗ್ಗಿ, ಚಿದಾನಂದ ಸೊಲ್ಲಾಪುರ, ರವೀಂದ್ರ ಸಂಪಗಾವಿ, ಎಸ್.ಎಲ್.ಕಾಗಿಯವರ, ಬಸವರಾಜ ಬಿಜ್ಜರಗಿ, ಪ್ರಕಾಶ ಮಠಪತಿ, ಮಲ್ಲಿಕಾರ್ಜುನ ನಾಶಿ, ಸಿದ್ರಾಮ ಸವದತ್ತಿ, ರಾಮಣ್ಣ ಹುಲಕುಂದ ಸೇರಿದಂತೆ ಅನೇಕರು ಇದ್ದರು.

ವಿಜಯಕುಮಾರ ವಂದಾಲ ಸ್ವಾಗತಿಸಿದರು. ಶಿಕ್ಷಕರಾದ ಮಲ್ಲಿಕಾರ್ಜುನ ಗಡೆನ್ನವರ, ಪ್ರಶಾಂತ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next