Advertisement
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂವಿದಾನವನ್ನು ಒಪ್ಪಿ ನಡೆಯುತ್ತಿರುವ ದಿನಗಳಲ್ಲೇ ಸಂವಿದಾನದ ಆಶಯಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದ್ದರೂ ಸಾರ್ವಜನಿಕರು ನಂಬಿ ನಡೆಯುತ್ತಿದ್ದೇವೆಂದರು.
Related Articles
Advertisement
ಧ್ವಜಾರೋಹಣ ನೆರವೇರಿಸಿದ ಉಪ ವಿಭಾಗಾಧಿಕಾರಿ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರು ಮಾತನಾಡಿ ದೇಶದ ಸಂವಿದಾನ 1950 ರಲ್ಲಿ ಜಾರಿಗೆ ಬಂದಿದ್ದು, ಈ ಗಣರಾಜ್ಯೋತ್ಸವದಂದು ಸಂವಿದಾನ ರಚನಾಕಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಆಶಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯ ಎಸ್.ಜಯರಾಂ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಉಪಾಧ್ಯಕ್ಷ ದೇವನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್ ಹಾಗೂ ಸದಸ್ಯರು, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಡಿವೈಎಸ್‌ಪಿ ರವಿಪ್ರಸಾದ್, ತಾ.ಪಂ.ಆಡಳಿತಾಧಿಕಾರಿ ನಂದಾ, ಇಓ ಗಿರೀಶ್, ಪೌರಾಯುಕ್ತ ರಮೇಶ್, ಬಿಇಓ ನಾಗರಾಜ್,ಕೃಷಿ ಅಧಿಕಾರಿ ವೆಂಕಟೇಶ್, ಎಇಇಗಳಾದ ಸಿದ್ದಪ್ಪ, ಬೋಜರಾಜ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಪಥಸಂಚಲನ: ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಎಸ್.ಐ. ಜಮೀರ್ ಅಹಮದ್ ನೇತೃತ್ವದ ಪೊಲೀಸ್‌ರಿಂದ ಧ್ವಜವಂದನೆ, ಹಾಗೂ ಕೇಂಬ್ರಿಡ್ಜ್ ಶಾಲಾ ಮಕ್ಕಳಿಂದ ದೇಶಪ್ರೇಮ ಮೆರೆವ ಸಂಗೀತ ನುಡಿಸುತ್ತಾ ಪಥಸಂಚಲನದಲ್ಲಿ ಸಾಗಿಬಂದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.