Advertisement
ಪೊಲೀಸರು, ಗೃಹ ರಕ್ಷಕ ದಳ ಸಿಬಂದಿ ಪಥಸಂಚಲನ ನಡೆಸಿದರು. ಪೆರ್ವಾಜೆ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ಕಾಬೆಟ್ಟು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಭುವನೇಂದ್ರ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಪಥಸಂಚಲನಕ್ಕೆ ಮೆರುಗು ನೀಡಿದರು.
ಗಾಂಧಿ ಮೈದಾನದಲ್ಲಿ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ತಹಶೀಲ್ದಾರ್ ಪುರಂದರ ಹೆಗ್ಡೆ, ಹಲವಾರು ಹೋರಾಟಗಾರರ ತ್ಯಾಗ, ಬಲಿದಾನ ದಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ, ದೇಶದ ರಕ್ಷಣೆಗಾಗಿ ಹುತಾತ್ಮರಾದ ಮಹಾತ್ಮರ ಸ್ಮರಣೆ ಜತೆ ಅವರ ಆದರ್ಶವನ್ನು ಅನುಸರಣೆ ಮಾಡಬೇಕೆಂದರು.
Related Articles
Advertisement
ಶಾಸಕ ವಿ. ಸುನಿಲ್ ಕುಮಾರ್, ಎಎಸ್‌ಪಿ ಪಿ. ಕೃಷ್ಣಕಾಂತ್, ತಾ.ಪಂ. ಇಒ ಡಾ| ಮೇ| ಹರ್ಷ ಕೆ.ಬಿ., ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಕ್ರೀಡಾಧಿಕಾರಿ ಫ್ರೆಡ್ರಿಕ್ ರೆಬೆಲ್ಲೋ, ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ, ಜಿ.ಪಂ. ಸದಸ್ಯರಾದ ಉದಯ್ ಕೋಟ್ಯಾನ್, ದಿವ್ಯಶ್ರೀ ಅಮೀನ್, ರೇಷ್ಮಾ ಶೆಟ್ಟಿ, ಸುಮಿತ್ ಶೆಟ್ಟಿ ಕೌಡೂರು, ತಾ.ಪಂ. ಮತ್ತು ಪುರಸಭಾ ಸದಸ್ಯರು, ಶಿಕ್ಷಕರು, ಇಲಾಖಾಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು. ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಪೂರ್ವ ನಿಗದಿಯಂತೆ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯದಲ್ಲಿ ಭೀಕರ ನೆರೆ ಸಂಭವಿಸಿದ ಹಿನ್ನೆಲೆಯಲ್ಲ ರದ್ದುಪಡಿಸಲಾಗಿತ್ತು. ತಾಲೂಕಿನ 254 ಶಾಲೆ, 34 ಗ್ರಾ.ಪಂ., ವಿವಿಧ ಸಂಘ-ಸಂಸ್ಥೆಗಳ ಕಚೇರಿಗಳಲ್ಲಿ ಧ್ವಜಾರೋಹಣ ನಡೆಸಿ, ಸಿಹಿತಿಂಡಿ ಹಂಚಲಾಯಿತು.
ಬೃಹತ್ ಬಾವುಟಪುರಸಭಾ ಸದಸ್ಯ ಶುಭದಾ ರಾವ್ ನಿರ್ಮಿಸಿರುವ 20×14 ಅಡಿ ವಿಸ್ತಾರದ ತ್ರಿವರ್ಣ ಧ್ವಜ ಆಕರ್ಷಣೀಯವಾಗಿತ್ತು. ವಿದ್ಯಾರ್ಥಿಗಳು ಸಮವಸ್ತ್ರ, ಕೇಸರಿ, ಬಿಳಿ, ಹಸಿರು ಬಣ್ಣದ ಕ್ಯಾಪ್ ಧರಿಸಿ, ಬಾವುಟವನ್ನು ಮೆರವಣಿಗೆ ಮೂಲಕ ಗಾಂಧಿ ಮೈದಾನಕ್ಕೆ ತಂದರು.