Advertisement

ಈ ಅಜ್ಜಿಗೊಂದು ಸಲಾಂ; ಇಂಗ್ಲೆಂಡ್ ನಿಂದ ನೇಪಾಳದವರೆಗೆ ಓಟದ ಹಿಂದಿನ ಉದ್ದೇಶವೇನು ಗೊತ್ತಾ

10:07 AM Dec 11, 2019 | Nagendra Trasi |

ಯುನೈಟೆಡ್ ಕಿಂಗ್ ಡಮ್: 2015ರ ಭೂಕಂಪದಿಂದ ನೇಪಾಳ ಜನರ ಬದುಕು ತತ್ತರಿಸಿ ಹೋಗಿದ್ದು, ಸ್ಥಳೀಯ ಜನರ ಆರೋಗ್ಯ, ಶಿಕ್ಷಣ ಹಾಗೂ ಕುಟುಂಬಗಳಿಗೆ ನೆರವು(ದೇಣಿಗೆ ಸಂಗ್ರಹ) ನೀಡುವ ನಿಟ್ಟಿನಲ್ಲಿ ಬ್ರಿಟನ್ ನ 73ವರ್ಷದ ರೋಸಿ ಸ್ವಾಲೆ ಪೋಪ್ ಅವರು ಯುರೋಪ್, ಇಸ್ತಾಂಬುಲ್, ಟರ್ಕಿ ಅಲ್ಲಿಂದ ಇಂಗ್ಲೆಂಡ್ ನಂತರ ನೇಪಾಳದ ಕಾಠ್ಮಂಡುವರೆಗೆ ಓಡಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

“ರನ್ ರೋಸಿ ರನ್” ಅಭಿಯಾನದಡಿ 2018ರಲ್ಲಿ ಓಡಲು ಆರಂಭಿಸಿರುವ 73 ವರ್ಷದ ಅಜ್ಜಿ ಈ ದೇಣಿಗೆ ಸಂಗ್ರಹದ ಓಟವನ್ನು ಸವಾಲಾಗಿ ಸ್ವೀಕರಿಸಿದ್ದಾರಂತೆ. ನೇಪಾಳಿಗರ ಬದುಕನ್ನು ಕಟ್ಟಿಕೊಡಲು ತನ್ನ ಪ್ರಯತ್ನ ಇದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇದು ಕೇವಲ ಜನರಿಗೆ ಆಹಾರ ಕೊಡುವ ಉದ್ದೇಶದ್ದಲ್ಲ. ಈ ನೆರವಿನ ಮೂಲಕ ಪ್ರತಿಭಾವಂತ ಜನರು ತಮ್ಮ ಊಟವನ್ನು ತಾವೇ ಸಂಪಾದಿಸಲು ಶಕ್ತರಾಗುವಂತೆ ಮಾಡುವುದಾಗಿದೆ ಎಂದು ಇಸ್ತಾಂಬುಲ್ ನಲ್ಲಿ ಓಡುತ್ತಲೇ ಸುದ್ದಿಗಾರರ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದಾರೆ.

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭಾರೀ ಭೂಕಂಪ(7.8ರಷ್ಟು ತೀವ್ರತೆ)ದಿಂದಾಗಿ ಒಂಬತ್ತು ಸಾವಿರ ಮಂದಿ ಸಾವನ್ನಪ್ಪಿದ್ದರು. ಸುಮಾರು 10 ಲಕ್ಷ ಮನೆಗಳು, ಕಟ್ಟಡಗಳು ನೆಲಸಮವಾಗಿದ್ದವು.

ಪೋಪ್ ವಾಲ್ಸೆಯ ಟೆನ್ಬೈ ನಿವಾಸಿ. ಈಕೆ 2018ರ ಜುಲೈನಲ್ಲಿ ಬ್ರೈಟೋನ್ ನಿಂದ ಓಟ ಪ್ರಾರಂಭಿಸಿದ್ದರು. ಈಗಾಗಲೇ ಅವರು ಓಡುತ್ತಲೇ ಟರ್ಕಿ(13ನೇ ದೇಶ)ಗೆ ಆಗಮಿಸಿದ್ದು, ಮುಂದಿನ ದೇಶ ರಿಪಬ್ಲಿಕ್ ಆಫ್ ಜಾರ್ಜಿಯಾಕ್ಕೆ ಭೇಟಿ ನೀಡಲಿದ್ದಾರೆ. ಪ್ರತಿದಿನ 20 ಕಿಲೋ ಮೀಟರ್ ಓಡುತ್ತಾರಂತೆ ಈ ಅಜ್ಜಿ!

Advertisement

ಪ್ರತಿದಿನ ರಾತ್ರಿ ಎಲ್ಲಿ ಮಲಗುತ್ತೇನೆ ಎಂಬುದು ನನಗೆ ಗೊತ್ತಿರುವುದಿಲ್ಲ. ನಾನು ಬಯಲು ಪ್ರದೇಶ, ಬೀದಿಯಲ್ಲಿ ನಿದ್ರಿಸುತ್ತೇನೆ. ಬೆಳಗ್ಗೆ ಎದ್ದು ಓಟ ಆರಂಭಿಸುತ್ತೇನೆ. ನಾನು ಓಡುತ್ತಲೇ ಜನರನ್ನು ಭೇಟಿಯಾಗುತ್ತೇನೆ. ತನ್ನ ದಿನಬಳಕೆಯ ವಸ್ತು, ಬಟ್ಟೆಗಳನ್ನು ಕೆಂಪು ಗಾಡಿಯಲ್ಲಿ ಹಾಕಿಕೊಂಡು ಅದರ ಬೆಲ್ಟ್ ಅನ್ನು ಬೆನ್ನಿಗೆ ಸುತ್ತಿಕೊಂಡು ಓಡುತ್ತಿರುವುದೇ ಪೋಪ್ ದೈನಂದಿನ ಕೆಲಸವಾಗಿದೆ.

ರೋಸಿ ಅವರನ್ನು ಅತೀ ದೂರದ ವಿಶ್ವದ ಏಕ ವ್ಯಕ್ತಿ ಓಟಗಾರ್ತಿ ಎಂದು ಗುರುತಿಸಲಾಗಿದೆ. 2004ರಲ್ಲಿಯೂ ದೇಣಿಗೆ ಸಂಗ್ರಹಕ್ಕಾಗಿ ವಿಶ್ವದಾದ್ಯಂತ ಓಟದ ಮೂಲಕ ಹಣ ಸಂಗ್ರಹಿಸಿದ್ದರು. 2015ರಲ್ಲಿ ಅಮೆರಿಕದಾದ್ಯಂತ ತನ್ನ ದಿವಂಗತ ಪತಿಯ ಗೌರವಾರ್ಥ ಓಡುವ ಮೂಲಕ ದೇಣಿಗೆ ಸಂಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next