Advertisement

ಅಜ್ಜನ ಜಾತ್ರೆಗೆ 72 ಕಿ.ಮೀ. ನಡೆದು ಬಂದ ಭಕ್ತರು

10:46 PM Jan 17, 2022 | Team Udayavani |

ಕೊಪ್ಪಳ: ನಾಡಿನ ಪ್ರಸಿದ್ಧ ಶ್ರೀಗವಿಸಿದ್ದೇಶ್ವರ ಜಾತ್ರೆಯು ಕೋವಿಡ್‌ ಉಲ½ಣದ ಹಿನ್ನೆಲೆಯಲ್ಲಿ ರದ್ದಾಗಿದ್ದರೂ ನಾಡಿನ ವಿವಿಧ ಭಾಗಗಳಿಂದ ಕೊಪ್ಪಳದ ಗವಿಮಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಈ ಮಧ್ಯೆ ಗದಗ ಜಿಲ್ಲೆಯ ರೋಣದ ನಾಲ್ವರು ಭಕ್ತರು 72 ಕಿ.ಮೀ. ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು ಗಮನ ಸೆಳೆದಿದ್ದಾರೆ.

Advertisement

ರೋಣದ ವೀರೇಶ ಬಾಲೊಳ್ಳಿ, ಭೀಮನಗೌಡ್ರ ಲಿಂಗನಗೌಡ್ರ, ಕಿರಣ್‌ ಗುರುಬಸತ್ತಿನಮಠ, ಬಸಯ್ಯ ಗುರುಬಸತ್ತಿಮಠ ಅವರು 72 ಕಿ.ಮೀ. ಕಾಲ್ನಡಿಗೆಯಲ್ಲೇ ಗವಿಮಠಕ್ಕೆ ಆಗಮಿಸಿ ಭಕ್ತಿಯ ಸೇವೆ ಸಲ್ಲಿಸಿದರು. ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರೋಣದಿಂದ ಹೊರಟ ಇವರು ಗವಿಸಿದ್ದೇಶ್ವರ ಸ್ವಾಮಿಗಳ ನಾಮಸ್ಮರಣೆ ಮಾಡುತ್ತಲೇ ಪಾದಯಾತ್ರೆ ಆಗಮಿಸಿ ರವಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶ್ರೀಮಠಕ್ಕೆ ತಲುಪಿದರು. ದಾರಿಯುದ್ದಕ್ಕೂ ಶ್ರೀಗಳ ಸೇವೆ, ಸಮಾಜಮುಖೀಕಾರ್ಯ,ಧಾರ್ಮಿಕಕಾರ್ಯ ನೆನೆಯುತ್ತಾ ನಾಮಸ್ಮರಣೆ ಮಾಡುತ್ತಲೇ ಆಗಮಿಸಿ ಶ್ರೀಗಳ ದರ್ಶನ ಪಡೆದರಲ್ಲದೇ, ಕತೃ ಗದ್ದುಗೆಯ ದರ್ಶನ ಪಡೆದು ಸಂಕಲ್ಪ ಈಡೇರಿಸಿದರು. ಎರಡು ವರ್ಷಗಳಿಂದ ಜಗತ್ತಿಗೆ ಆವರಿಸಿರುವ ಕೊರೊನಾ ಸೋಂಕಿನಿಂದಾಗಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸರಳ ಹಾಗೂ ಸಾಂಕೇತಿಕವಾಗಿ ನಡೆಯುತ್ತಿದೆ.

ಕೊರೊನಾ ಅಬ್ಬರದ ಮಧ್ಯೆಯೂ ಶ್ರೀಮಠಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಎತ್ತಿನ ಬಂಡೆಯಲ್ಲಿ, ಟ್ರಾÂಕ್ಟರ್‌, ಟಂಟಂ, ಆಟೋ ಸೇರಿ ವಿವಿಧ ವಾಹನಗಳಲ್ಲಿ ದವಸ, ಧಾನ್ಯದೊಂದಿಗೆ ಆಗಮಿಸಿ ಶ್ರೀಮಠಕ್ಕೆ ಅರ್ಪಿಸಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಕೋವಿಡ್‌ ಇದ್ದರೂ ಮಠಕ್ಕೆ ಆಗಮಿಸಿ ಭಕ್ತಿಯ ಸೇವೆ ಸಲ್ಲಿಸಿದ್ದರು. ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ cಳದಿಂದಾಗಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಿದೆ. ಆದರೆ ಧಾರ್ಮಿಕಕಾರ್ಯಕ್ರಮಗಳು ಮಠದಲ್ಲೇ ಸರಳ ಹಾಗೂ ಸಾಂಕೇತಿಕವಾಗಿ ನಡೆಯುತ್ತಿದೆ. ಇದ್ಯಾವುದನ್ನು ಲೆಕ್ಕಿಸದೇ ಸದ್ಭಕ್ತರು ಮಠಕ್ಕೆ ಕಾಲ್ನಡಿಗೆಯ ಪಾದಯಾತ್ರೆ ಆಗಮಿಸಿ ತಮ್ಮದೇ ಸೇವೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next