Advertisement

ಮನೆಯಯಲ್ಲೇ ಕೊಲೆಯಾದ ಸ್ಥಿತಿಯಲ್ಲಿ ಅತ್ತೆ, ಸೊಸೆ ಮೃತದೇಹ ಪತ್ತೆ : ದರೋಡೆಕೋರರ ಕೈವಾಡ ಶಂಕೆ ?

11:47 AM Aug 16, 2022 | Team Udayavani |

ನವದೆಹಲಿ : ವಾಯುವ್ಯ ದೆಹಲಿಯ ಸುಭಾಷ್ ಪಾರ್ಕ್‌ನಲ್ಲಿರುವ ನಿವಾಸವೊಂದರಲ್ಲಿ 70 ವರ್ಷದ ಮಹಿಳೆ ಮತ್ತು ಅವರ ಸೊಸೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಮಂಗಳವಾರ ಮುಂಜಾನೆ ಪತ್ತೆಯಾಗಿದೆ.

Advertisement

ಮೊಮ್ಮಕ್ಕಳು ಉತ್ತರಾಖಂಡದ ಋಷಿಕೇಶ ಮತ್ತು ಮಸ್ಸೂರಿಗೆ ಪ್ರವಾಸದಿಂದ ಹಿಂದಿರುಗಿದ ವೇಳೆ ಅವರ ಮನೆಯ ನೆಲ ಮತ್ತು ಮೊದಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಕುರಿತು ಮೊಮ್ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಪೊಲೀಸರು ಮನೆಗೆ ಯಾರೂ ಬಲವಂತದಿಂದ ಪ್ರವೇಶ ಮಾಡಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಆದ ಕಾರಣ ಕೊಲೆಗೆ ಯಾವುದೇ ವೈಯಕ್ತಿಕ ದ್ವೇಷದ ಪರಿಣಾಮವೇ ಅಥವಾ ದರೋಡೆಗಾಗಿ ಹತ್ಯೆ ಮಾಡಲಾಯಿತೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next