ಭೋಪಾಲ್: ಆಟ ಆಡುವ ವೇಳೆ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಜೀವಂತವಾಗಿ ಬದುಕಿ ಬರುತ್ತಾನೆ ಎನ್ನುವ ಹಾರೈಕೆಗಳು ಹುಸಿಯಾಗಿದೆ. 7 ವರ್ಷದ ಬಾಲಕ ಲೋಕೇಶ್ ಅಹಿರ್ವಾರ್ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯ ಲಾಟೇರಿ ತಹಸಿಲ್ ವ್ಯಾಪ್ತಿಯ ಖೇರ್ಖೇಡಿ ಪಥರ್ ಗ್ರಾಮದಲ್ಲಿ ಬಾಲಕ ಲೋಕೇಶ್ ಅಹಿರ್ವಾರ್ ಮಂಗಳವಾರ ( ಮಾ.14 ರಂದು) ಮುಂಜಾನೆ 11 ಗಂಟೆಯ ವೇಳೆಗೆ ಮನೆಯ ಪಕ್ಕದಲ್ಲಿ ಆಡುತ್ತಿದ್ದಾಗ ಕಾಲು ಜಾರಿ ಅಲ್ಲೇ ಇದ್ದ ಕೊಳವೆ ಬಾವಿಗೆ ಬಿದ್ದಿದ್ದ. ಎನ್‌ಡಿಆರ್ ಎಫ್ ಸಿಬ್ಬಂದಿಗಳು ಬಾಲಕನ ರಕ್ಷಣೆಗೆ ಹರಸಾಹಸಪಟ್ಟು ಕೊಳವೆ ಬಾವಿಯ ಪಕ್ಕದಲ್ಲೇ ಸುರಂಗವನ್ನು ಅಗೆದಿದ್ದರು.ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಬಾಲಕನನ್ನು ಹೊರ ತೆಗೆದ ಬಳಿಕ ವೈದ್ಯರು ಪರೀಕ್ಷಿಸಿದ್ದಾರೆ. ಆದರೆ ಬಾಲಕ ಆದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
60 ಅಡಿ ಆಳದ ಕೊಳವೆ ಬಾವಿಗೆ ಬಿದ್ದು, 43 ಅಡಿ ಆಳದಲ್ಲಿ ಬಾಲಕ ಲೋಕೇಶ್ ಸಿಲುಕಿಕೊಂಡಿದ್ದ. ಮೃತ ಬಾಲಕನ ಕುಟುಂಬಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.